ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿದ್ದಾರೆ. ಬೆಳಗಾವಿಯ ಗುರ್ಲಾಪುರದಲ್ಲಿ ಹೋರಾಟ ಹಿಂಪಡೆಯಲಾಯಿತು. ಪ್ರತಿ ಟನ್ ಕಬ್ಬಿಗೆ ಮೂರು ಸಾವಿರದ ಆರುನೂರು ರೂಪಾಯಿ ನೀಡಲು ಸಮ್ಮತಿ ಸಿಕ್ಕಿದೆ.
ಈ ನಿರ್ಧಾರದಿಂದ ಕಬ್ಬು ಬೆಳೆಗಾರರಲ್ಲಿ ತೀವ್ರ ಸಂತಸ ಮೂಡಿದ್ದು, ಜಿಲ್ಲಾಡಳಿತದಿಂದ ಒಪ್ಪಂದದ ಅಧಿಕೃತ ದಾಖಲೆಗಳನ್ನು ರೈತರು ಪಡೆದುಕೊಂಡಿದ್ದಾರೆ. ದಾಖಲೆ ಕೈಸೇರುತ್ತಿದ್ದಂತೆ ರೈತ ಹೋರಾಟಗಾರರು ತಮ್ಮ ಧರಣಿ ಮತ್ತು ಹೋರಾಟವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ.

















