ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ವಿಶೇಷ ಅಭಿಯಾನವನ್ನು ಮುಂದುವರೆಸಿದೆ. ಒಂದು ತಿಂಗಳ ಕಾಲ ನಡೆಯುವ ಈ ವಿಶೇಷ ಅಭಿಯಾನದ ಭಾಗವಾಗಿ ಕರವೇ ಕಾರ್ಯಕರ್ತರು ಇದೀಗ ಅಂತಾರಾಷ್ಟ್ರೀಯ ಕಂಪನಿಗಳಿಗೂ ಲಗ್ಗೆಯಿಟ್ಟಿದ್ದಾರೆ.
ಓಲಾ ಪ್ರೈವೇಟ್ ಲಿಮಿಟೆಡ್ ಹಾಗೂ ಐಟಿ ಸೆಂಟರ್ ಮತ್ತು ಎಕ್ಸ್ಸೆಂಚರ್ ಪ್ರೈವೇಟ್ ಲಿಮಿಟೆಡ್ ಐಟಿ ಸೆಂಟರ್‌ಗಳಿಗೆ ಭೇಟಿ ನೀಡಿ ಕರವೇ ಮನವಿ ಸಲ್ಲಿಸಿದೆ. ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕರವೇ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಗೌಡ ಅವರು ಎರಡು ಕಂಪನಿಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.


















