ಕೆಎಸ್ಆರ್ಟಿಸಿ ಮಾಸಿಕ ಬಸ್ ಪಾಸ್ ದರಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ವೇಗದೂತ ಮತ್ತು ತಡೆರಹಿತ ಬಸ್ಗಳ ಪಾಸ್ ದರಗಳು ಹೆಚ್ಚಳವಾಗಿವೆ. ಸಾಮಾನ್ಯ ಪ್ರಯಾಣಿಕರಿಗೆ ಈ ಹಿಂದೆ 520 ರೂಪಾಯಿ ಇದ್ದ ಪಾಸ್ ದರವು ಈಗ 640 ರೂಪಾಯಿಗಳಿಗೆ ಏರಿಕೆಯಾಗಿದೆ.
ಹಿರಿಯ ನಾಗರಿಕರಿಗೆ 464 ರೂಪಾಯಿ ಇದ್ದ ದರವನ್ನು 570 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇನ್ನು ಮಾಸಿಕ ಪಾಸ್ ದರವು 2,070 ರೂಪಾಯಿಗಳಿಂದ ಬರೋಬ್ಬರಿ 2,550 ರೂಪಾಯಿಗಳಿಗೆ ಏರಿಕೆಯಾಗಿದೆ. ಹಿರಿಯ ನಾಗರಿಕರ ಮಾಸಿಕ ಪಾಸ್ ದರ 1,865 ರಿಂದ 2,290 ರೂ.ಗೆ ಏರಿಕೆಯಾಗಿದೆ.


















