ಬೆಂಗಳೂರು: ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Suryoday SFB) ತಮ್ಮ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿವೆ. ಎರಡೂ ಬ್ಯಾಂಕುಗಳು ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಹಬ್ಬದ ಸೀಸನ್ ಹಾಗೂ ಸಾಲಗಾರರ ಬೇಡಿಕೆಗೆ ತಕ್ಕಂತೆ ಠೇವಣಿದಾರರನ್ನು ಆಕರ್ಷಿಸಲು ಈ ಹೊಸ ದರಗಳನ್ನು ಜಾರಿಗೆ ತರಲಾಗಿದೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 5 ವರ್ಷಗಳ ಅವಧಿಯ ಎಫ್.ಡಿ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ. 8.25 ಹಾಗೂ ಹಿರಿಯ ನಾಗರಿಕರಿಗೆ ಗರಿಷ್ಠ ಶೇ. 8.60 ರವರೆಗೆ ಬಡ್ಡಿದರ ನೀಡುತ್ತಿದೆ. ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿದರ ಹೆಚ್ಚಿಸಿವೆ. ಇದರೊಂದಿಗೆ ನಿಶ್ಚಿತ ಠೇವಣಿ ಇರಿಸುವವರಿಗೆ ಇದು ಒಳ್ಳೆಯ ಸುದ್ದಿ ಎನಿಸಿದೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪರಿಷ್ಕೃತ ಬಡ್ಡಿದರಗಳ ಅನ್ವಯ ಹಿರಿಯ ನಾಗರಿಕರಿಗೆ ಅತ್ಯಧಿಕ ಲಾಭ ಕಲ್ಪಿಸುತ್ತಿದ್ದು, 30 ತಿಂಗಳ ಅವಧಿಯ ಠೇವಣಿಗೆ ಸಾಮಾನ್ಯರಿಗೆ ಶೇ. 8.10 ಹಾಗೂ ಹಿರಿಯ ನಾಗರಿಕರಿಗೆ ಶೇ. 8.25 ರಷ್ಟು ಬಡ್ಡಿ ದೊರೆಯಲಿದೆ.
ಬ್ಯಾಂಕ್ ಆಫ್ ಇಂಡಿಯಾ 1 ರಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್ ಗಳ ಬಡ್ಡಿದರವನ್ನು ಶೇ. 6.7 ಕ್ಕೆ ಏರಿಸಿದೆ. ಇದರೊಂದಿಗೆ ‘ಸ್ಟಾರ್ ಅಕ್ಷಯ್’ ಹೆಸರಿನ ವಿಶೇಷ 500 ದಿನಗಳ ಎಫ್.ಡಿ ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ಸಾಮಾನ್ಯರಿಗೆ ಶೇ. 6.85 ಹಾಗೂ ಹಿರಿಯ ನಾಗರಿಕರಿಗೆ ಶೇ. 7.35 ರಷ್ಟು ಬಡ್ಡಿ ಸಿಗಲಿದೆ.
ಈ ಹೊಸ ಬಡ್ಡಿದರಗಳು ಹೊಸದಾಗಿ ಮಾಡಲಾಗುವ ಡೆಪಾಸಿಟ್ಗಳಿಗೆ ಅಥವಾ ನವೀಕರಿಸಲಾಗುವ (Renewal) ಎಫ್.ಡಿಗಳಿಗೆ ಮಾತ್ರ ಅನ್ವಯಿಸುತ್ತವೆ. ಈಗಾಗಲೇ ಚಾಲ್ತಿಯಲ್ಲಿರುವ ಹಳೆಯ ಡೆಪಾಸಿಟ್ಗಳಿಗೆ ಮುಂಚಿನ ದರಗಳೇ ಮುಂದುವರಿಯಲಿವೆ.


















