ಏಳು ಜನರ ಹತ್ಯಾಕಾಂಡ ನಡೆಸಿದ ಆರೋಪಿ ಇಂದುಶೇಖರ್ ಹಿನ್ನೆಲೆ ಚೆಕ್ ಮಾಡಿದಾಗ ಆತನ ಮೇಲಿರುವ ಹಳೆಯ ಕೇಸ್ಗಳು ಪತ್ತೆಯಾಗಿವೆ.ಆತ 2018ರಲ್ಲೇ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ರಾಬರಿ ಕೇಸ್ ಒಂದರಲ್ಲಿ ಅರೆಸ್ಟ್ ಆಗಿದ್ದನು.
‘ಪೊಲೀಸ್ ವಾಯ್ಸ್’ ಎಂಬ ಲೋಕಲ್ ಪೇಪರ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸಂಪರ್ಕ ಹೊಂದಿದ್ದ ಶಂಕೆ ಇದೆ. ಈ ವೇಳೆ ಕ್ರೈಂ ಕೇಸ್ಗಳು, ಕೊಲೆ ಹಾಗೂ ಸಾಕ್ಷ್ಯ ನಾಶದ ಬಗ್ಗೆ ತಿಳಿದುಕೊಂಡು ಈ ಮರ್ಡರ್ ಪ್ಲಾನ್ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ತನ್ನ ಡೈರಿಯಲ್ಲಿ ಹಲವು ಪೊಲೀಸ್ ಅಧಿಕಾರಿಗಳ ಕಾಂಟ್ಯಾಕ್ಟ್ ಡೀಟೇಲ್ಸ್ ಇಟ್ಟುಕೊಂಡಿದ್ದ.
ಪೇಪರ್ ಹೆಸರಲ್ಲಿ ಹಲವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಮತ್ತು ಕೆಲ ಹುಡುಗರನ್ನು ಬಳಸಿ ಚೈನ್ ಸ್ನ್ಯಾಚಿಂಗ್ ಮಾಡಿಸುತ್ತಿದ್ದ ಎಂಬ ಮಾಹಿತಿಯೂ ಪತ್ತೆಯಾಗಿದೆ.



















