ಬೆಂಗಳೂರಿನ ಶ್ರೀರಾಂಪುರದ ಭೀಕರ ಕೊಲೆಯಲ್ಲಿ ಹಂತಕ ಶೇಖರ್ ಒಬ್ಬೊಬ್ಬರ ಮೃತದೇಹವನ್ನು ಒಂದೊಂದು ಕಡೆ ಎಸೆದಿರುವುದು ಪೊಲೀಸರಿಗೆ ಬಿಗ್ ಚಾಲೆಂಜ್ ಆಗಿದೆ. ಆರೋಪಿ ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಾರ್ಮುಡಿ ಘಾಟ್ನಲ್ಲೂ ಮೃತದೇಹಗಳನ್ನು ಬಿಸಾಡಿರುವ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಬಾಮೈದ ಶಿವಕುಮಾರ್ ಪುತ್ರನ ಒಂದೇ ಮೃತದೇಹ ಪತ್ತೆಯಾಗಿದ್ದು, ಉಳಿದ ಆರು ಮೃತದೇಹಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಉಳಿದ ಮೃತದೇಹಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು, ತಪಾಸಣೆಗಾಗಿ ತಮಿಳುನಾಡಿನ ಸೇಲಂನಲ್ಲೂ ಕೂಡ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

















