ಬೆಂಗಳೂರು : ಸಾಲ ಕೇಳಿದ್ದಕ್ಕೆ ಕೋಪಗೊಂಡು ಬೀಡಾ ಅಂಗಡಿ ಮಾಲೀಕನ ಮೇಲೆ ವ್ಯಕ್ತಿಯೋರ್ವ ಕ್ರೂರವಾಗಿ ದಾಳಿ ನಡೆಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲದಲ್ಲಿ ನಡೆದಿದೆ.
ಆರೋಪಿ ಬೀಡಾ ತೆಗೆದುಕೊಂಡು ಹಣ ಪಾವತಿಸದೆ ಸಾಲ ಮಾಡಿದ್ದನು. ಬಳಿಕ ಬೀಡಾದ ಹಣವನ್ನು ನೀಡುವಂತೆ ಅಂಗಡಿ ಮಾಲೀಕ ಕೇಳಿದ್ದರಿಂದ ಆಕ್ರೋಶಗೊಂಡು ದಾಳಿ ನಡೆಸಿದ್ದಾನೆ.
ರೊಚ್ಚಿಗೆದ್ದ ಆರೋಪಿ ಮಚ್ಚಿನಿಂದ ಅಂಗಡಿ ಮಾಲೀಕನ ಕೈಗೆ ಹಲ್ಲೆ ನಡೆಸಿದ್ದು, ಗಾಯಗೊಂಡ ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ಭಾರತ ಎಂದಿಗೂ ಭಯೋತ್ಪಾದನೆಗೆ ತಲೆಬಾಗದು’ : ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಪ್ರಧಾನಿ ಮೋದಿ ಭಾವಪೂರ್ಣ ನಮನ!



















