ಬೆಂಗಳೂರು : ಬೆಂಗಳೂರಿನ ಆರ್‌ಟಿ ನಗರದದಲ್ಲಿರುವ ವಿಜಯ ಭಾರತಿ ಪಬ್ಲಿಕ್ ಶಾಲೆಯ ವಿಧ್ಯಾರ್ಥಿನಿ ಅಭೂತಪೂರ್ವ ಸಾಧನೆ ಮೆರೆದಿದ್ದಾಳೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2025-26ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜಯ ಭಾರತಿ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮಧುರ.ವಿ 625ಕ್ಕೆ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ್‍ಯಾಂಕ್ ಬರುವುದರ ಮೂಲಕ ಪೋಷಕರು ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ.
“ವಿದ್ಯಾರ್ಥಿನಿಯ ಪರಿಶ್ರಮ, ಶಿಸ್ತು ಮತ್ತು ಸಮರ್ಪಣಾ ಮನೋಭಾವಕ್ಕೆ ಶರಣು. ಆಕೆಯ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ವಿಜಯ ಭಾರತಿ ಪಬ್ಲಿಕ್ ಶಾಲೆ ಹಾಗೂ ಭಾರತಿ ಸಮೂಹ ಸಂಸ್ಥೆ ಶುಭ ಹಾರೈಸಿವೆ. ಇದರೊಂದಿಗೆ, ಭಾರತಿ ಪಬ್ಲಿಕ್ ಶಾಲೆಯು ಈ ಬಾರಿ 24 ಡಿಸ್ಟಿಂಕ್ಷನ್ ಮತ್ತು 77 ಫಸ್ಟ್ ಕ್ಲಾಸ್ ಗಳಿಸಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದೆ.
ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2025-26ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ರಾಜ್ಯಾದ್ಯಂತ 94.10 ಶೇಕಡಾ ದಾಖಲೆ ಫಲಿತಾಂಶ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 98.40 ಶೇಕಡಾ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 98 ಶೇಕಡಾ ಫಲಿತಾಂಶ ದಾಖಲಿಸಿದ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.
ಇನ್ನು, ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಉಡುಪಿ, ಚಿಕ್ಕೋಡಿ, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ ಮತ್ತು ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : ಸಿಕ್ಕಿಂ ಮೈದಾನದಲ್ಲಿ ಪ್ರಧಾನಿ ಮೋದಿ ಫುಟ್‌ಬಾಲ್ ಕಿಕ್ : “ಗೋಲ್” ಮಾತ್ರ ಬಂಗಾಳ!



















