ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿ ಹೃದಯವಿದ್ರಾವಕ ಘಟನೆ ನಡೆದಿದೆ. ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿರುವ ಹಿರಣ್ಯಕೇಶಿ ನದಿಯಲ್ಲಿ ಈಜಲು ಹೋದ 9 ವರ್ಷದ ಬಾಲಕ ಆಳಕ್ಕೆ ಹೋಗಿ ಮುಳುಗುತ್ತಿದ್ದ ವೇಳೆ, ರಕ್ಷಿಸಲು ನದಿಗೆ ಇಳಿದ ತಾಯಿಯೂ ನೀರುಪಾಲಾಗಿದ್ದಾರೆ.
ಲಕ್ಷ್ಮಿ ಸುಧಾಕರ ಕುಟೋಳಿ (27) ಮತ್ತು ಸುಪ್ರೀತ್ ಸುಧಾಕರ ಕುಟೋಳಿ (9) ಮೃತ ತಾಯಿ-ಮಗನೆಂದು ಗುರುತಿಸಲಾಗಿದೆ. ಇವರು ಸಂಕೇಶ್ವರ ಪಟ್ಟಣದ ನಿವಾಸಿಗಳಾಗಿದ್ದಾರೆ.
ಘಟನೆ ಸ್ಥಳಕ್ಕೆ ಸಂಕೇಶ್ವರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ತಾಯಿಯ ಶವ ಪತ್ತೆಯಾಗಿದ್ದು, ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಘಟನೆ ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಸಾಲ ಕೇಳಿದ್ದಕ್ಕೆ ಬೀಡಾ ಅಂಗಡಿ ಮಾಲೀಕನ ಮೇಲೆ ಮಚ್ಚಿನಿಂದ ಹಲ್ಲೆ!


















