ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಅನ್ನೋದು ಹಾಸು ಹೊದ್ದಾಗಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಹಾಗೂ ಲೋಕಾಯುಕ್ತದ ಭಯವೇ ಇಲ್ಲದಂತಾಗಿದೆ.
ಇದೀಗ ದ್ವಿತೀಯ ದರ್ಜೆ ಸಹಾಯಕನೋರ್ವ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಇಲಾಖೆ ತನಿಖೆ ಅಂತಿಮ ಆದೇಶ ವರದಿ ನೀಡಲು ದ್ವಿತೀಯ ದರ್ಜೆ ಸಹಾಯಕ ಮುದಾಸಿರ್ ಅಹಮ್ಮದ್ ಎಂಬಾತ ಮಲ್ಲಿಕಾರ್ಜುನ ಶಂಕರ್ ನಿದೋನಿ ಎಂಬ ವೆಟರ್ನಿಟಿ ಇನ್ಸ್‌ಪೆಕ್ಟರ್‌ರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಈ ಸಂಬಂಧ ಮಲ್ಲಿಕಾರ್ಜುನ ಶಂಕರ್ ಲೋಕಾಯುಕ್ತ ಮೆಟ್ಟಿಲೇರಿದ್ದರು. ಆ ಬಳಿಕ ಕಾರ್ಯಚರಣೆ ನಡಸಿದ ಲೋಕಾ ಅಧಿಕಾರಿಗಳು, ಮುದಾಸಿರ್ ಅಹಮ್ಮದ್ ಹತ್ತು ಸಾವಿರ ಲಂಚ ಪಡೆಯುತ್ತಿದ್ದಾಗಲೇ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಲೋಕಾ ಟೀಂ ತನಿಖೆ ಮುಂದುವರೆಸಿದೆ.
ಇದನ್ನೂ ಓದಿ : 412 ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ : ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ!



















