ಬೆಂಗಳೂರು : ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿ ನಿನ್ನೆ ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ವೇಳೆ ಅಬ್ಬರಿಸಿದ ಮಳೆಗೆ ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 150ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ.

ವಿಜಯನಗರ, R.T.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಕಬ್ಬನ್ಪಾರ್ಕ್, ಹೈಗ್ರೌಂಡ್ಸ್, ಉಪ್ಪಾರಪೇಟೆ, ಹಲಸೂರುಗೇಟ್, ವಿಲ್ಸನ್ಗಾರ್ಡನ್, ಮೈಕೋಲೇಔಟ್, ಸದಾಶಿವನಗರದಲ್ಲಿ ಬೃಹತ್ ಮರಗಳು ಧರೆಗುರುಳಿವೆ.

ಗುಡುಗು, ಸಿಡಿಲು ಆಲಿಕಲ್ಲು ಮಳೆಗೆ ಬಸವನಗುಡಿಯಲ್ಲಿ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಇದ್ರಿಂದ ಕಾರು, ಬಸ್, ಲಾರಿ ಹಾಗೂ ಬೈಕ್ಗಳು ಜಖಂಗೊಂಡಿವೆ. ಲಾರಿ ಹೋಗ್ತಿದ್ದಾಗ ಮರ ಬಿದಿದ್ದು, ಬಸ್ ಹಾಗೂ ಬೈಕ್ಗಳಿಗೂ ಹಾನಿಯಾಗಿವೆ.
ಇನ್ನು ಮಳೆ ಅಬ್ಬರಿಂದಾಗಿ ಹಲವು ಏರಿಯಾಗಳಲ್ಲಿ ವಿದ್ಯುತ್ ಕೇಬಲ್ ಕಟ್ ಆಗಿವೆ. ಹೀಗಾಗಿ ನಿವಾಸಿಗಳು ಕತ್ತಲಲ್ಲೇ ಕುಳಿತಿದ್ದಾರೆ. ಹಲವೆಡೆ ಕರೆಂಟ್ ಇಲ್ಲದೆ ಜನ ಪರದಾಡಿದ್ದಾರೆ.

ಮಳೆಯಿಂದಾಗಿ ಸಿಟಿ ಸಿವಿಲ್ ಕೋರ್ಟ್ ಕ್ಯಾಂಟೀನ್ ಜಲಾವೃತಗೊಂಡಿತ್ತು. ಕ್ಯಾಂಟೀನ್ನಲ್ಲೇ ಲಾಕ್ ಆಗಿ ವಕೀಲರು ಪರದಾಡಿದ್ದಾರೆ. ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದ್ದು, ದ್ವಿಚಕ್ರ ವಾಹನ, ಆಟೋಗಳು ಜಲಾವೃತಗೊಂಡಿವೆ. ಎಂ.ಜಿ.ರಸ್ತೆಯಲ್ಲಿನ ಗ್ರಂಥಾಲಯಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಂಥಾಲಯದಲ್ಲಿ 5 ಸಾವಿರ ಪುಸ್ತಕಗಳು ನೀರುಪಾಲಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬಿಸಿಲಿಗೆ ಬೆಂದಿದ್ದ ಬೆಂಗಳೂರಿಗೆ ತಂಪೆರೆದ ವರುಣ : ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾರ್ಭಟ!


















