ಬೆಂಗಳೂರು : ಹಲವು ದಿನಗಳಿಂದ ಬಿಸಿಲ ಝಳಕ್ಕೆ ಬೆಂದು ಹೋಗಿದ್ದ ಸಿಲಿಕಾನ್ ಸಿಟಿಗೆ ಕೊನೆಗೂ ವರುಣನ ಆಗಮನವಾಗಿದೆ. ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ ಸಹಿತ ದಿಢೀರ್ ಆಲಿಕಲ್ಲು ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರಿನ ಹಲವೆಡೆ ಮಳೆರಾಯ ಎಂಟ್ರಿ ಕೊಟ್ಟು ತಂಪೆರೆದಿದ್ದು, ಜೋರಾದ ಗಾಳಿ ಜೊತೆ ಗುಡುಗು, ಮಿಂಚು ಸಹಿತ ಅಬ್ಬರಿಸಿದ್ದಾನೆ. ಸದ್ಯ, ಬೇಸಿಗೆ ಶೆಖೆಗೆ ಬೆಂದು ಹೋಗಿದ್ದ ಸಿಲಿಕಾನ್ ಸಿಟಿ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಗುಡುಗು, ಬಿರುಗಾಳಿ ಸಹಿತ ಮೆಜೆಸ್ಟಿಕ್, ಲಾಲ್ ಬಾಗ್ ಸೇರಿದಂತೆ ಹಲವಡೆ ಭರ್ಜರಿ ಮಳೆಯಾಗಿದೆ. ಸಂಜೆ ಆಫೀಸ್ ಬಿಡೋ ಹೊತ್ತಲ್ಲೇ ಮಳೆ ಆರಂಭವಾಗಿದ್ದು, ಕೆಲಸ ಮುಗಿಸಿ ಮನೆ ಕಡೆ ಹೊರಟ್ಟಿದ್ದ ಜನರು ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ.
ಸದ್ಯ ಮೆಜೆಸ್ಟಿಕ್, ಮಾರುಕಟ್ಟೆ (ಮಾರ್ಕೆಟ್), ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಗುಟ್ಟಹಳ್ಳಿ, ವಸಂತನಗರ, ಶಾಂತಿನಗರ, ಆರ್.ಟಿ.ನಗರ, ಜಯನಗರ, ಜೆ.ಪಿ ನಗರ, ಹೆಬ್ಬಾಳ, ಶಿವಾಜಿ ನಗರ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಡಬಲ್ ರೋಡ್, ರಿಚ್ಮಂಡ್ ಸರ್ಕಲ್ ಮತ್ತು ವಿಧಾನಸೌಧದ ಸುತ್ತಮುತ್ತ ವರುಣ ಆರ್ಭಟಿಸುತ್ತಿದೆ.
ಹವಾಮಾನ ಇಲಾಖೆ ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ ; ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು – ತಾಯಿ, ಮಗು ಸ್ಥಳದಲ್ಲೇ ಸಾವು!



















