ಉಡುಪಿ : ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಮ್ಮ ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆಯ ಪವಿತ್ರ ಕ್ಷೇತ್ರವಾದ ಕಮಲಶಿಲೆಗೆ ಭೇಟಿ ನೀಡಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದಿದ್ದಾರೆ.

ದೇವಳದ ಅನುವಂಶೀಯ ಆಡಳಿತ ಮೊಕ್ತೆಸರರಾದ ಎಸ್. ಸಚ್ಚಿದಾನಂದ ಚಾತ್ರ ಅವರು ಎಸ್. ಜಾನಕಿ ಹಾಗೂ ಅವರ ಕುಟುಂಬದವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಳಿಕ ದೇವಳದ ಪರವಾಗಿ ಪ್ರಸಾದ, ಶಾಲು ಹಾಗೂ ಮಂಗಳ ದ್ರವ್ಯಗಳನ್ನು ನೀಡಿ ಗೌರವಿಸಿದ್ದಾರೆ.
ಇನ್ನು, ಎಸ್. ಜಾನಕಿ ಅವರು ದೇವಿಗೆ ಭಕ್ತಿಪೂರ್ವಕವಾಗಿ ತುಪ್ಪದ ದೀಪ ಸೇವೆಯನ್ನು ಸಮರ್ಪಿಸಿದ್ದಾರೆ. ಜೊತೆಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : 168 ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರ ನೇಮಕಾತಿಗೆ ಅರ್ಜಿ ಆಹ್ವಾನ!


















