ಶಿವಮೊಗ್ಗ, ಆಗಸ್ಟ್ 15 : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ಕಳೆದ ವರ್ಷ ಲೋಕಾರ್ಪಣೆಗೊಂಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಐತಿಹಾಸಿಕ ಸಿಗಂದೂರು ಸೇತುವೆಯ ಮೇಲೆ ಕರೂರು ಹೋಬಳಿಯ ಸ್ಥಳೀಯ ಜನರು ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆದಿದ್ದಾರೆ.
ಕರೂರಿನ ಕಳಸವಳ್ಳಿ-ಅಂಬಾರಗೋಡ್ಲು ಸಂಪರ್ಕಿಸುವ ಶರಾವತಿ ಹಿನ್ನೀರಿನ ಬೃಹತ್ ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕೀ ಜೈ’ ಎಂಬ ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಲಾಯಿತು.
ಈ ಅಪರೂಪದ ಕ್ಷಣದಲ್ಲಿ ಸ್ಥಳೀಯ ಪ್ರಮುಖರು ಸೇರಿದಂತೆ ನೂರಾರು ದೇಶಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ತಡರಾತ್ರಿಯಲ್ಲೂ ಕಂಠಪೂರ್ತಿ ದೇಶಪ್ರೇಮದ ಗೀತೆಗಳನ್ನು ಹಾಡಿ ಸಂಭ್ರಮ ಹಂಚಿಕೊಂಡರು.
ಇದನ್ನೂ ಓದಿ : ‘ಸಪ್ತಧಾರೆ’ಯ ಮಾರ್ಗ, ಜೆನ್-ಝಿ ತಲುಪುವ ಗುರಿ : ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಘೋಷಣೆ


















