ಮಂಡ್ಯ : ಮೈಸೂರು, ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್‌ಎಸ್ (KRS) ಜಲಾಶಯದ ನೀರಿನ ಮಟ್ಟ 100 ಅಡಿಗೆ ಏರಿಕೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ ಶತಕದ ಗಡಿ ದಾಟಿದೆ.
ಕಳೆದ 3 ದಿನಗಳ ಅಂತರದಲ್ಲಿ KRS ಜಲಾಶಯದ ನೀರಿನ ಮಟ್ಟದಲ್ಲಿ 8 ಅಡಿ ಏರಿಕೆ ಕಂಡುಬಂದಿದ್ದು, ಡ್ಯಾಂನಲ್ಲಿ ಪ್ರಸ್ತುತ 23 ಟಿಎಂಸಿ ನೀರು ಸಂಗ್ರಹವಾಗಿದೆ. ಮುಖ್ಯವಾಗಿ ಕೊಡಗು ಭಾಗದಲ್ಲಿ ವರುಣಾರ್ಭಟ ಮುಂದುವರಿದಿರುವುದರಿಂದ ಕೆಆರ್‌ಎಸ್‌ಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 100.34 ಅಡಿ
- ಒಳಹರಿವು: 32,048 ಕ್ಯೂಸೆಕ್
- ಹೊರಹರಿವು: 1,821 ಕ್ಯೂಸೆಕ್
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಸಂಗ್ರಹ: 23.079 ಟಿಎಂಸಿ
ಇನ್ನು, ಮುಂದಿನ 10 ರಿಂದ 15 ದಿನ ಇದೇ ರೀತಿ ಮಳೆ ಬಂದು, ಜಲಾಶಯಕ್ಕೆ ಒಳಹರಿವು ಮುಂದುವರಿದರೆ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಸದ್ಯ ರೈತರ ಪುಲ್ ಖುಷ್ ಆಗಿದ್ದು, ನೀರಿನ ಕೊರತೆಯಿಂದಾಗಿ ತೀವ್ರಗೊಂಡಿದ್ದ ಕಾವೇರಿ ಹೋರಾಟದ ಕಾವು ಕೂಡ ತಣ್ಣಗಾದಂತಿದೆ.
ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ : ಹೈಕಮಾಂಡ್ ಲಿಸ್ಟ್‌ಗಾಗಿ ಸಿಎಂ ಡಿಕೆಶಿ ವೈಟಿಂಗ್.. ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದು!



















