ಬೆಂಗಳೂರು : ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌ಗೆ ಇ.ಡಿ ಶಾಕ್ ಕೊಟ್ಟಿದೆ. ಶಾಸಕರ ಮನೆ ಸೇರಿದಂತೆ 17 ಸ್ಥಳಗಳಲ್ಲಿ CRPF ಸಿಬ್ಬಂದಿಗಳ ನೇತೃತ್ವದ ಭದ್ರತೆಯೊಂದಿಗೆ ಇ.ಡಿ ದಾಳಿ ನಡೆಸಿದೆ.
ಬಿಡಿಎ ಅಧ್ಯಕ್ಷರಾಗಿರೂ ಆಗಿರುವ ಹ್ಯಾರಿಸ್ ಪುತ್ರ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಮನೆ ಮೇಲೆ ಇ.ಡಿ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಹ್ಯಾಕರ್ ಶ್ರೀಕಿ ಜೊತೆಯಲ್ಲಿ ನಲಪಾಡ್ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇ.ಡಿ ರೇಡ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಕಿ ಜೊತೆ ನಲಪಾಡ್ 6 ವರ್ಷದ ಆರ್ಥಿಕ ವ್ಯವಹಾರ ಹೊಂದಿದ್ದರು. ಇಬ್ಬರೂ ಸೇರಿ 4.5 ಕೋಟಿ ರೂ. ವಹಿವಾಟು ನಡೆಸಿದ್ದರು ಎಂಬ ಆರೋಪವು ಕೇಳಿಬಂದಿತ್ತು. ಬಳಿಕ ಬಿಟ್ ಕಾಯಿನ್ ಹಗರಣದಲ್ಲಿ ಶ್ರೀಕಿ ಬಂಧನ ಮಾಡಲಾಗಿತ್ತು.
ಬಿಟ್ ಕಾಯಿನ್ ಹಗರಣದಲ್ಲಿ ಅನೇಕ ರಾಜಕೀಯ ವ್ಯಕ್ತಿಗಳ ಹೆಸರು ತಳಕು ಹಾಕಿಕೊಂಡಿತ್ತು. ಇದೇ ವಿಚಾರದಲ್ಲಿ ಶ್ರೀಕಿ ಅನೇಕ ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪ ಮಾಡಿದ್ದ. ಇದ್ರಿಂದ ಈ ಆಯಾಮದಲ್ಲಿಯೂ ಸಹ ಇ.ಡಿ ಅಧಿಕಾರಿಗಳು ರೇಡ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂಓದಿ : ಬೈ ಎಲೆಕ್ಷನ್ ರಿಸಲ್ಟ್ ಬೆನ್ನಲ್ಲೇ ‘ಕಮಲ’ ಪಡೆಯಲ್ಲಿ ನಾಯಕತ್ವ ಬದಲಾವಣೆ?



















