ಬೆಂಗಳೂರು: 218ನೇ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ಅದ್ದೂರಿ ಯಶಸ್ವಿ ಕಂಡು, ಇತಿಹಾಸ ಸೃಷ್ಟಿಸಿದೆ.
ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನದ ವೀಕ್ಷಣೆಗೆ ಜನಸಾಗರ ಹರಿದು ಬರುತ್ತಿದ್ದು, ಒಂದೇ ದಿನಕ್ಕೆ 28 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ಅಷ್ಟಲ್ಲದೇ, ಒಂದೆ ದಿನದಲ್ಲಿ 7,77,430 ರೂ. ಸಂಗ್ರಹವಾಗಿದೆ. ಇಲ್ಲಿಯವರೆಗೆ 218ನೇ ಫಲ ಪುಷ್ಪ ಪ್ರದರ್ಶನಕ್ಕೆ 1 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.



















