ಬೆಂಗಳೂರು : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಹುದಿನಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. 36 ತಿಂಗಳ ವೇತನ ಹಿಂಬಾಕಿ, ವೇತನ ಪರಿಷ್ಕರಣೆ ಆಗ್ರಹಿಸಿ ನೌಕರರು ಮುಷ್ಕರ ನಡೆಸಿದ್ದರು. ಆದ್ರೆ, ಸರ್ಕಾರ ಸಾರಿಗೆ ನೌಕರರ 26 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಿದೆ.
ಈ ಮೂಲಕ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮೊದಲ ಕಂತಿನ ಹಿಂಬಾಕಿ ಹಣ ಬಿಡುಗಡೆ ಮಾಡಿದೆ. ಒಟ್ಟು 450 ಕೋಟಿ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಒಟ್ಟು 26 ತಿಂಗಳ 1271.92 ಕೋಟಿ ಹಿಂಬಾಕಿ ಬಾಕಿ ವೇತನವನ್ನ ಸಾರಿಗೆ ಇಲಾಖೆ ಉಳಿಸಿಕೊಂಡಿತ್ತು. ಇದೀಗ ಮೊದಲ ಕಂತಾಗಿ 450 ಕೋಟಿ ಹಣ ಬಿಡುಗಡೆ ಮಾಡಿದೆ.
ಇದರಲ್ಲಿ KSRTCಗೆ 143.85 ಕೋಟಿ, BMTCಗೆ 137.24 ಕೋಟಿ, NWKRTC 87 ಕೋಟಿ ಹಾಗೂ KKRTCಗೆ 81.91 ಕೋಟಿ ಹಂಚಿಕೆ ಮಾಡಲಾಗ್ತಿದೆ. 2021 ಜನವರಿ 1ರಿಂದ 2023 ಫೆಬ್ರವರಿ 23ರ ವರೆಗಿನ ಹಿಂಬಾಕಿ ಮೊತ್ತವನ್ನ ಸರ್ಕಾರ ಬಿಡುಗಡೆ ಮಾಡಿದೆ.
ಇದನ್ನೂ ಓದಿ : ಜಾಮೀನಿಗಾಗಿ ಮತ್ತೆ ಸುಪ್ರೀಂ ಕದ ತಟ್ಟಿದ ದರ್ಶನ್.. ವಿಚಾರಣೆ ಯಾವಾಗ?


















