ಬೆಳಗಾವಿ : ರೈತನೊಬ್ಬ 1ಎಕರೆ ಜಮೀನಿನಲ್ಲಿ 27ಟನ್ ತಾಳೆ ಬೆಳೆ ಬೆಳೆದು ದಾಖಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.
62 ವರ್ಷದ ರೈತ ಸುರೇಶ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಪಡೆದು, ಕೋಟಿ ಕನಸಿನ ಕೃಷಿ ಸಾಕಾರಗೊಳಿಸಿದ್ದಾರೆ.ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ತಾಳೆ ಉತ್ಪಾದನೆ ಮಾಡಿದ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಾಮಾನ್ಯವಾಗಿ ಆಂಧ್ರಪ್ರದೇಶದಲ್ಲಿ ತಾಳೆ ಬೆಳೆಯು ಹೆಚ್ಚು ಕಂಡುಬರುತ್ತದೆ. ಆದರೆ ಇದೀಗ ಕರ್ನಾಟಕದ ರೈತರೂ ಪೈಪೋಟಿ ನೀಡುತ್ತಿರುವುದು ಶ್ಲಾಘನೀಯವಾಗಿದೆ.
ರೈತನ ಈ ಸಾಧನೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದಲ್ಲೇ ಅತ್ಯಧಿಕ ಇಳುವರಿ ಪಡೆದಿರುವ ಈ ಸಾಧನೆ ಇತರ ರೈತರಿಗೆ ಮಾದರಿಯಾಗಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್



















