ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮತ್ತೆ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಸಾಂಸ್ಕೃತಿಕ ಕಾಲೋನಿಯ ಮನೆಯಲ್ಲಿ ಬೀಗ ಒಡೆದು ಒಳನುಗ್ಗಿದ ದುಷ್ಕರ್ಮಿಗಳು, ಬಂಗಾರದ ಆಭರಣ, ಬೆಳ್ಳಿ ವಸ್ತುಗಳು ಹಾಗೂ 40 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಲಕ್ಷ್ಮಣ ಫಕೀರಪ್ಪ ಪಾಗದ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಯಾರು ಇಲ್ಲದ ಸಮಯದಲ್ಲೇ ಕಳ್ಳರು ಕೃತ್ಯವೆಸಗಿದ್ದಾರೆ. ಪದೇ ಪದೇ ಈ ರೀತಿ ಕಳ್ಳತನದ ಪ್ರಕರಣಗಳು ನಗರದಲ್ಲಿ ಕಂಡುಬರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಸದ್ಯ ಸ್ಥಳಕ್ಕೆ ಇಳಕಲ್ ಶಹರ್ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಆತಂಕಗೊಂಡ ಸ್ಥಳೀಯರು ಪರಾರಿಯಾದ ಕಳ್ಳರನ್ನು ಬೇಗನೆ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕರವೇ ಮಹಿಳಾ ಘಟಕ ಪ್ರತಿಭಟನೆ



















