ಕೋಲಾರ : ಭೀಕರ ಅಪಘಾತದಲ್ಲಿ ಕೋಲಾರ ಮೂಲದ ಅಣ್ಣ-ತಂಗಿ ದಾರುಣ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಗಡಿ ಭಾಗದಲ್ಲಿ ಸಂಭವಿಸಿದೆ.
ಕೋಲಾರದ ಪಾರಂಡಹಳ್ಳಿ ನಿವಾಸಿಗಳಾದ ಬಾಲಾಜಿ ಹಾಗೂ ಆತನ ತಂಗಿ ಮಹಾಶ್ರೀ ಮೃತರು. ಅಪಘಾತದ ವೇಳೆ ಬೈಕ್‌ಗೆ ಡಿಕ್ಕಿಯಾದ ಲಾರಿ ಕೆಳಗೆ ಸಿಲುಕಿದ ಬೈಕ್ ಅನ್ನು ಸುಮಾರು ಅರ್ಧ ಕಿ.ಮೀ ದೂರ ಎಳೆದೊಯ್ದಿದೆ ಎಂದು ತಿಳಿದುಬಂದಿದೆ. ಪರಿಣಾಮ ಅಣ್ಣ ತಂಗಿ ಇಬ್ಬರು ಲಾರಿಯಡಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತದೇಹಗಳು ಲಾರಿಯಡಿ ಸಿಲುಕಿದ ಪರಿಣಾಮ ಹೊರ ತೆಗೆಯಲು ಸ್ಥಳೀಯರು ಪರದಾಡಿದ್ದಾರೆ. ತಂಗಿಯ ಶವವನ್ನ ಹೊರ ತೆಗದಿದ್ದು, ಅಣ್ಣ ಬಾಲಾಜಿ ದೇಹ ಚಕ್ರಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ತಮಿಳುನಾಡು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಗುವಿನ ಪ್ರಾಣ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಫುಟ್ಬಾಲ್ ಆಟಗಾರನ ಪತ್ನಿ : ವೆನೆಜುವೆಲಾ ಭೂಕಂಪದ ಕಣ್ಣೀರ ಕಥೆ!


















