ಶಿವಮೊಗ್ಗ : ಸಿಎಂ ಸಿದ್ಧರಾಮಯ್ಯನವರು ಭಗವದ್ಗೀತೆ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಭಗವದ್ಗೀತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ತಾಕತ್ ಇದ್ದರೆ ಕುರಾನ್ ಬಗ್ಗೆ ಮಾತನಾಡಲಿ ಎಂದು ಸಿದ್ದರಾಮಯ್ಯ ವಿರುದ್ಧ ಕೆ.ಎಸ್ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ ಭಗವದ್ಗೀತೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಕುಮಾರಸ್ವಾಮಿಯವರ ಪತ್ರಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭಗವದ್ಗೀತೆ ಪಠ್ಯ ಪುಸ್ತಕದಲ್ಲಿ ಅಧ್ಯಯನ ವಿಷಯವಾಗಿ ಭೋಧಿಸಲ್ಪಡಬೇಕು. ಈ ಮೂಲಕ ಆದರ್ಶ ಪ್ರಜೆಗಳ ಸೇವೆ ಮಾಡುವ ಸೌಲಭ್ಯ ಸಿಗುತ್ತದೆ ಎಂದಿದ್ದಾರೆ.
ಸಿಎಂ ಸಿದ್ಧರಾಮಯ್ಯನವರು ಭಗವದ್ಗೀತೆ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಭಗವದ್ಗೀತೆಯನ್ನು ಕೇವಲ ಮನುವಾದಿಗಳು ಮಾತ್ರ ಓದುತ್ತಾರೆಂದು ಹೇಳಿರುವುದು ಸರಿಯಲ್ಲ, ಕೂಡಲೇ ಸಿಎಂ ಸಿದ್ಧರಾಮಯ್ಯ ದೇಶದ ಜನರ ಕ್ಷಮೆ ಕೋರಬೇಕು. ಮಹಾತ್ಮ ಗಾಂಧೀಜಿಯವರ ಜೀವನದಲ್ಲೇ ಭಗವದ್ಗೀತೆ ಸ್ಫೂರ್ತಿಯಾಗಿತ್ತು. ನಿಮಗೆ ತಾಕತ್ ಇದ್ದರೆ ಕುರಾನ್ ಬಗ್ಗೆ ಮಾತನಾಡಿ ನೊಡೋಣ ಕುರಾನ್, ಬೈಬಲ್ ಬಗ್ಗೆ ಮಾತನಾಡಿದರೆ ಒಂದು ಕ್ಷಣವೂ ಅವರು ಸಿಎಂ ಆಗಿ ಉಳಿಯುವುದಿಲ್ಲ. ಕುರಾನ್ ಬಗ್ಗೆ ಮಾತನಾಡಲು ನಿಮಗೆ ತಾಕತ್ತು ಇಲ್ಲವೇ, ಭಗವದ್ಗೀತೆ ಬಗ್ಗೆ ಮಾತನಾಡಿ ತಮ್ಮ ಹೈಕಮಾಂಡ್ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಪ್ರಾಯಶ್ಚಿತ್ತದ ರೀತಿಯಲ್ಲಿ ಕೂಡಲೇ ಸಿಎಂ ಸಿದ್ಧರಾಮಯ್ಯ ಜನರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡಿದ ಸಿದ್ದು:
ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕ ವಚನದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಒಬ್ಬ ಮಹಿಳೆಗೆ ಅವಳು ಎಂಬ ಪದ ಪ್ರಯೋಗ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯನವರು ಅವರ ಕ್ಷಮೆ ಕೋರಬೇಕು. ಒಬ್ಬ ಮಹಿಳೆಗೆ ಅವಳು ಎಂಬ ಪದ ಪ್ರಯೋಗ ಮಾಡಿದ್ದಾರೆ. ಅಕಸ್ಮಾತ್ ಕ್ಷಮೆ ಕೋರಿಲ್ಲವಾದರೆ, ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳೋದು ಗ್ಯಾರಂಟಿ ಯಾಕಂದ್ರೆ ಮುಸಲ್ಮಾನರ ಪರವಾಗಿ ದ್ವೇಷದ ಭಾಷಣ ಮಾಡುವುದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ಬೇರೆ ಸರ್ಕಾರ ಬರುತ್ತಿದ್ದಂತೆ ಅವರಿಬ್ಬರೂ ಜೈಲಿಗೆ ಹೋಗ್ತಾರೆ ಎಂದಿದ್ದಾರೆ.
ಇದನ್ನೂ ಓದಿ : ವಿಜಯೇಂದ್ರಗೆ ಬೇರೆ ಏನ್ ಕೆಲಸ ಇದೆ, ಪ್ರತಿಭಟನೆ ಮಾಡ್ಲಿ | ಶಿವರಾಮ್ ಹೆಬ್ಬಾರ್



















