ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಯಲಗಲೆ ಗ್ರಾಮದ ಹರುಡಿಕೆ ನಿವಾಸಿ ನಾಗೇಂದ್ರ ಅವರು ತಮ್ಮ 16 ವರ್ಷದ ಪುತ್ರ ನಿರಂಜನ್ ಎನ್. ಕಾಣೆಯಾಗಿರುವ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾರ್ವಜನಿಕರಿಗೆ ವಿದ್ಯಾರ್ಥಿ ಎಲ್ಲಿಯಾದರೂ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ನಿರಂಜನ್ ಅವರು, ಜುಲೈ 11ರಂದು ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ಆದರೆ ಕಾಲೇಜಿಗೂ ಹೋಗದೇ, ಮನೆಗೂ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಮನಸ್ಸಿಗೆ ಏನನ್ನೋ ಹಚ್ಚಿಕೊಂಡು ಮನೆ ಬಿಟ್ಟು ಹೋಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಣೆಯಾದ ವಿದ್ಯಾರ್ಥಿಯ ಚಹರೆ :
- ಹೆಸರು : ನಿರಂಜನ್ ಎನ್.
- ವಯಸ್ಸು : 16 ವರ್ಷ
- ಮುಖ : ಅಗಲವಾದ ಮುಖ
- ಕೂದಲು : ಗುಂಗರು ಕೂದಲು
- ಮೈಕಟ್ಟು : ಸಾಧಾರಣ
- ಮೈಬಣ್ಣ : ಗೋಧಿ
- ಎತ್ತರ : 5.5 ಅಡಿ
- ಧರಿಸಿದ್ದ ಉಡುಪು : ನೀಲಿ-ಬಿಳಿ ಬಣ್ಣದ ಟೀ-ಶರ್ಟ್, ಕಪ್ಪು ಪ್ಯಾಂಟ್ ಹಾಗೂ ನೀಲಿ ಬಣ್ಣದ ಶಾಲಾ ಬ್ಯಾಗ್
- ಮಾತನಾಡುವ ಭಾಷೆ : ಕನ್ನಡ
ಈ ಚಹರೆಯುಳ್ಳ ವಿದ್ಯಾರ್ಥಿ ಎಲ್ಲಿಯಾದರೂ ಕಂಡುಬಂದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ತಕ್ಷಣ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಸಂಪರ್ಕಿಸಲು :
- ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ : 08182-261400
- ಸಾಗರ ಉಪವಿಭಾಗ ಎಎಸ್‌ಪಿ ಕಚೇರಿ : 08183-226082
- ಪೊಲೀಸ್ ಇನ್ಸ್‌ಪೆಕ್ಟರ್, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ : 9480803361
ಇದನ್ನೂ ಓದಿ : ITR ಸಲ್ಲಿಕೆಯ ಗಡುವು ವಿಸ್ತರಣೆ ಆಗುತ್ತಾ? ಲೇಟ್ ಆಗಿ ಸಲ್ಲಿಸಿದ್ರೆ ಎಷ್ಟು ದಂಡ?



















