ಬೆಂಗಳೂರು : ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರಿಗೆ ಸುವರ್ಣಾವಕಾಶ ದೊರೆತಿದೆ. ದೇಶದ ಸೇನೆಯ ಪ್ರಮುಖ ವಿಭಾಗವಾಗಿರುವ ಆರ್ಮಿ ಆರ್ಡಿನನ್ಸ್ ಕಾರ್ಪ್ಸ್ (Army Ordnance Corps Recruitment 2026) ಸಂಸ್ಥೆಯಲ್ಲಿ ಖಾಲಿ ಇರುವ 2,615 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಆರ್ಮಿ ಆರ್ಡಿನನ್ಸ್ ಕಾರ್ಪ್ಸ್
ಒಟ್ಟು ಹುದ್ದೆಗಳು: 2,615
ಹುದ್ದೆಗಳ ಹೆಸರು: ಫೈರ್ ಮ್ಯಾನ್ ಇತ್ಯಾದಿ
ಉದ್ಯೋಗ ಸ್ಥಳ: ದೇಶಾದ್ಯಂತ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 23
1,799 ಟ್ರೇಡ್ಸ್ ಮನ್ ಮೇಟ್, 508 ಫೈರ್ ಮ್ಯಾನ್, 104 ಜೂನಿಯರ್ ಆಫೀಸ್ ಅಸಿಸ್ಟಂಟ್, 142 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹಾಗೂ 50 ಮಟಿರಿಯಲ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 29,200 – 92,300 ರೂಪಾಯಿ ಸಂಬಳ ನೀಡಲಾಗುತ್ತದೆ. ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಟೈಪಿಂಗ್ ಟೆಸ್ಟ್, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ aocrecruitment.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು
ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಫೀಸ್ ತುಂಬುವ ಮೂಲಕ ಅರ್ಜಿ ಸಲ್ಲಿಸಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಬೇಕು
ಇದನ್ನೂ ಓದಿ : ಕೇಂದ್ರ ಸರ್ಕಾರದ DGQA ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕಾತಿ : ಕರ್ನಾಟಕದಲ್ಲೂ ಇದೆ ಅವಕಾಶ


















