ಪಾಕಿಸ್ತಾನ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ 8 ಹೊಸ ಪುರಾತನ ಸ್ಥಳಗಳ ಜೊತೆಗೆ 1,200 ವರ್ಷಗಳ ಹಿಂದಿನ ಸಣ್ಣ ದೇವಸ್ಥಾನವೊಂದು ಪತ್ತೆಯಾಗಿದೆ.
ಧರ್ಮಗಳ ಸಂಶೋಧನೆ ಕುರಿತು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ನಿಂದ ತಕ್ಷಿಲಾದವರೆಗೆ ಈ ಉತ್ಖನನ ಕಾರ್ಯ ಸಾಗುತ್ತಿದೆ. ಖೈಬರ್ ಪಖ್ತುಂಖ್ವಾ ಪುರಾತತ್ವ ನಿರ್ದೇಶನಾಲಯದ ಸಹಯೋಗದೊಂದಿಗೆ ಇಟಾಲಿಯನ್ ಪುರಾತತ್ವಶಾಸ್ತ್ರಜ್ಞರು ಈ ಸಂಶೋಧನೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ | ಡೊನಾಲ್ಡ್ ಟ್ರಂಪ್
ಈ ಸಂಶೋಧನೆ ವೇಳೆ ಬರಿಕೋಟ್ ಸ್ವಾತ್ನಲ್ಲಿ ಹುದುಗಿ ಹೋಗಿದ್ದ ಅಂದಾಜು 1,200 ವರ್ಷದ ದೇಗುಲ ಪತ್ತೆಯಾಗಿದ್ದು, ಇದು ಈ ಪ್ರದೇಶದಲ್ಲಿ ನಿರಂತರವಾದ ಸಂಸ್ಕೃತಿ ಮತ್ತು ನಾಗರಿಕತೆ ಪರಂಪರೆಯ ಕುರಿತು ಅಪರೂಪದ ಸಾಕ್ಷ್ಯವನ್ನು ಒದಗಿಸಿದೆ.



















