ಬೆಂಗಳೂರು : ನಮ್ಮ ಮೆಟ್ರೋ ಪಿಲ್ಲರ್ಗೆ ಲೈಟಿಂಗ್ಸ್ ಅಳವಡಿಸುವಾಗ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವನ್ನಪ್ಪಿದರುವ ಘಟನೆ ವೈಟ್‌ಫೀಲ್ಡ್ ಟು ಚಲ್ಲಘಟ್ಟ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಬಳಿ ನಡೆದಿದೆ. ಗುರಪ್ಪ(70) ಮೃತ ಕಾರ್ಮಿಕ ಎಂದು ತಿಳಿದುಬಂದಿದ್ದು, ಘಟನಾ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಆರ್ ಎಲೆಕ್ಟ್ರಿಕಲ್ಸ್ ಎಂಬ ಸಂಸ್ಥೆ ಬಿಎಂಆರ್ಸಿಎಲ್ನಿಂದ ಲೈಟಿಂಗ್ಸ್ ಹಾಕುವ ಟೆಂಡರ್ ಪಡೆದಿತ್ತು. ಹಾಗಾಗಿ ಸಂಸ್ಥೆಯ ಕಾರ್ಮಿಕ ಗುರಪ್ಪ ಮೆಟ್ರೋ ಪಿಲ್ಲರ್ಗೆ ಲೈಟಿಂಗ್ಸ್ ಅಳವಡಿಸುತ್ತಿದ್ದರು. ಲೈಟಿಂಗ್ಗಾಗಿ ಅರ್ಥಿಂಗ್ ಗುಂಡಿ ಅಗೆಯಲಾಗುತಿತ್ತು. ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಗುಂಡಿ ಅಗೆಯುವಾಗ ಅಡಿಯಲ್ಲಿದ್ದ ಕೇಬಲ್ಗೆ ಡ್ರಿಲ್ಲಿಂಗ್ ಮಿಷನ್ ತಾಗಿದೆ. ಈ ವೇಳೆ ವಿದ್ಯುತ್ ಶಾಕ್ನಿಂದ ಗುರಪ್ಪ ಅಸ್ವಸ್ಥರಾಗಿದ್ದಾರೆ.
ತಕ್ಷಣ ಅವರನ್ನು ಸ್ಥಳಿಯರು ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರಪ್ಪ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ತುಮಕೂರಲ್ಲಿ ಅನಿಷ್ಟ ಪದ್ದತಿ ಇನ್ನೂ ಜೀವಂತ – ಕಾರ್ಮಿಕರಿಂದ ಬರಿಗೈನಲ್ಲಿ ಮಲ ಬಾಚಿಸಿದ KEB ಎಂಜಿನಿಯರ್ಸ್!



















