ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಪ್ರಾಸ್ಟೇಟ್ ಕ್ಯಾನ್ಸರ್ ಬಾಧಿಸಿರುವುದನ್ನು ಅವರ ಕಚೇರಿ ಮೂಲಗಳು ಖಚಿತ ಪಡಿಸಿವೆ.
ಮೂತ್ರನಾಳದ ರೋಗ ಲಕ್ಷಣಗಳು ಕಳೆದ ವಾರ ಪತ್ತೆಯಾದ ಬೆನ್ನಲ್ಲೇ ವೈದ್ಯರು ಬೈಡನ್ ಅವರನ್ನು ತೀವ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಅವರ ಜನನೇಂದ್ರೀಯ ಗ್ರಂಥಿಯಲ್ಲಿ ಸಣ್ಣ ಗಂಟು ಪರೀಕ್ಷೆ ವೇಳೆ ದೃಡವಾಗಿತ್ತು. ಇದರಿಂದಾಗಿ ಮತ್ತಷ್ಟು ತೀವ್ರತರ ತಪಾಸಣೆ ಬಳಿಕವೀಗ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.
ಇದು ಹೆಚ್ಚಿನ ಆಕ್ರಮಣಕಾರಿ ರೋಗವಾಗಿದ್ದು, ಹಾರ್ಮೋನ್ ಗಳಿಗೆ ಬಾಧಿಸಿದೆ. ಹೀಗಾಗಿ ಫಿಲಿಡೆಲ್ಫಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ತೀರ್ಮಾನಿಸಲಾಗಿದ್ದು, ಬೈಡನ್ ಮತ್ತು ಕುಟುಂಬ ಸದಸ್ಯರೊಟ್ಟಿಗೆ ಚರ್ಚಿಸಿ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತೆ ಅಂತಾ ಸ್ಪಷ್ಟಪಡಿಸಿದ್ದಾರೆ.



















