ಚೆನ್ನೈ: ನಟ ವಿಜಯ್ ಮತ್ತು ಸಂಗೀತ ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ನಟಿ ತ್ರಿಷಾ ಕೃಷ್ಣನ್, ಅವರ ಒಂದು ವಾರದ ಹಿಂದಿನ ಸೋಶಿಯಲ್ ಮೀಡಿಯಾ ಪೋಸ್ಟ್ ಇದೀಗ ವೈರಲ್ ಆಗಿದೆ. ತ್ರಿಷಾ ಮಾಡಿದ್ದ ಪೋಸ್ಟ್‌ನಲ್ಲಿ, ‘It’s a choice to be unbothered, choose it’ ಎಂದು ಬರೆದುಕೊಂಡಿದ್ದರು. ಅಂದರೆ, “ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇರುವುದೂ ಒಂದು ಆಯ್ಕೆ, ಅದನ್ನೇ ಆರಿಸಿಕೊಳ್ಳಿ” ಎಂಬ ಅರ್ಥದಲ್ಲಿ ತ್ರಿಷಾ ಪೋಸ್ಟ್ ಮಾಡಿದ್ದರು.
ಆದರೆ ಇದೀಗ ವಿಜಯ್–ಸಂಗೀತಾ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ತ್ರಿಷಾ ಅವರ ಹಳೆಯ ಪೋಸ್ಟ್‌ಗೆ ಹೊಸ ಅರ್ಥ ಸಿಗುತ್ತಿದೆ. ತ್ರಿಷಾ ಒಂದು ವಾರದ ಹಿಂದೆಯೇ ಯಾವುದಾದರೂ ಹಿಂಟ್ ಕೊಟ್ಟಿದ್ರಾ?ಅವರ ಪೋಸ್ಟ್‌ನ ಸೀಕ್ರೆಟ್ ಏನು? ಎಂಬ ಚರ್ಚೆ ಇದೀಗ ಜೋರಾಗಿದೆ.
ಇನ್ನು ತ್ರಿಷಾ ಅವರ ಪೋಸ್ಟ್‌ಗೆ ವಿಜಯ್ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದು, ಪ್ರೀತಿಯೇ ಗೆದ್ದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ತ್ರಿಷಾ ಅವರ ಈ ಪೋಸ್ಟ್ ನಿಜಕ್ಕೂ ವಿಜಯ್–ಸಂಗೀತಾ ವಿಚಾರಕ್ಕೆ ಸಂಬಂಧಿಸಿದ್ದೇನಾ? ಅಥವಾ ಕೇವಲ ಸಾಮಾನ್ಯ ಪೋಸ್ಟ್ ಆಗಿತ್ತಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.



















