ಬೆಂಗಳೂರು: ಚಿನ್ನದ ಬೆಲೆಯ ನಾಗಾಲೋಟ ಸತತ 2ನೇ ದಿನವೂ ಮುಂದುವರಿದಿದೆ. ಬಂಗಾರದ ದರದಲ್ಲಿ ಶನಿವಾರವೂ ಏರಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 100 ರುಪಾಯಿ ಹೆಚ್ಚಾಗಿ 13,965 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 109 ರುಪಾಯಿ ದುಬಾರಿಯಾಗಿ 15,235 ರುಪಾಯಿಗೆ ಬಂದಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,720 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,39,650 ರುಪಾಯಿ ಹಾಗೂ 100 ಗ್ರಾಂಗೆ 13,96,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,21,880 ರುಪಾಯಿ, 10 ಗ್ರಾಂಗೆ 1,52,350 ರುಪಾಯಿ ಹಾಗೂ 100 ಗ್ರಾಂಗೆ 15,23,500 ರುಪಾಯಿ ಇದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,900 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,164 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,985 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,255 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ ಇದೆ.
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 245 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,450 ರುಪಾಯಿ ಹಾಗೂ 1 ಕೆಜಿಗೆ 2,45,000 ರುಪಾಯಿ ಇದೆ.



















