ಬೆಂಗಳೂರು : ರಿಲಯನ್ಸ್ ಜಿಯೋ 10ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಜಿಯೋ ಹೋಮ್ (JioHome) ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಅರ್ಹ ಜಿಯೋ ಹೋಮ್ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಉಚಿತವಾಗಿ 1 ವರ್ಷದ ಅಮೆಜಾನ್ ಪ್ರೈಮ್ ಲೈಟ್ (Amazon Prime Lite) ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಒಟಿಟಿ ಪ್ರಿಯರಿಗೆ ಇದು ಗುಡ್ ನ್ಯೂಸ್ ಎನಿಸಿದೆ.
ಟಿವಿ, ಆನ್ ಲೈನ್ ಒಟಿಟಿ ಚಂದಾದಾರಿಕೆಗಳು ಮತ್ತು ವೈ-ಫೈ ಸಂಪರ್ಕ ಹೊಂದಿರುವ ಜಿಯೋಹೋಮ್ ಪ್ಲಾನ್ ಗಳಲ್ಲಿ ಆಫರ್ ಲಭ್ಯವಿದೆ. 30 ಎಂಬಿಪಿಎಸ್ ಮತ್ತು 100 ಎಂಬಿಪಿಎಸ್ ವೇಗದ ಇಂಟರ್ನೆಟ್ ನೀಡುವ ಜಿಯೋಹೋಮ್ ಪ್ಲಾನ್ ಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಈ 12 ತಿಂಗಳ ಉಚಿತ ಆಫರ್ ಸಿಗಲಿದೆ.
ಅಮೆಜಾನ್ ಪ್ರೈಮ್ ಲೈಟ್ ಸೌಲಭ್ಯಗಳು: ಈ ಪ್ಲಾನ್ ಮೂಲಕ ಗ್ರಾಹಕರು ‘ಅಮೆಜಾನ್ ಪ್ರೈಮ್ ವಿಡಿಯೋ’ ಬಳಸಬಹುದು. ಇಷ್ಟದ ಸಿನಿಮಾಗಳು ಹಾಗೂ ವೆಬ್ ಸಿರೀಸ್ ಗಳನ್ನು ವೀಕ್ಷಿಸಬಹುದು. ಅಲ್ಲದೆ, ಅಮೆಜಾನ್ ನಲ್ಲಿ ಶಾಪಿಂಗ್ ಮಾಡುವಾಗ ಉಚಿತ ಮತ್ತು ಕ್ಷಿಪ್ರವಾಗಿ ಡೆಲಿವರಿ ಸೌಲಭ್ಯಗಳನ್ನು ಪಡೆಯಬಹುದು.
888 ರೂ. ಮತ್ತು 1,199 ಪ್ಲಾನ್ ಹೊಂದಿರುವವರು ಹಾಗೂ 150 ಎಂಬಿಪಿಎಸ್ ಅಥವಾ ಅದಕ್ಕಿಂತ ಹೆಚ್ಚಿನ ವೇಗದ ಪ್ಲಾನ್ ಬಳಸುವ ಗ್ರಾಹಕರಿಗೆ ಈಗಾಗಲೇ ಸಿಗುತ್ತಿರುವ 24 ತಿಂಗಳ (2 ವರ್ಷ) ಪ್ರೈಮ್ ಲೈಟ್ ಚಂದಾದಾರಿಕೆ ಮುಂದುವರಿಯಲಿದೆ. ಅವರು ಹೊಸ 12 ತಿಂಗಳ ಪ್ಲಾನ್ ಗೆ ಬದಲಾಯಿಸುವ ಅಗತ್ಯವಿರುವುದಿಲ್ಲ.
ಉಚಿತ ಆಫರ್ ಕ್ಲೇಮ್ ಮಾಡುವುದು ಹೇಗೆ?
- ನಿಮ್ಮ ಮೊಬೈಲ್ ನಲ್ಲಿ MyJio ಆ್ಯಪ್ ಓಪನ್ ಮಾಡಿ.
- JioHome ವಿಭಾಗಕ್ಕೆ ಹೋಗಿ.
- ಹೋಮ್ ಪೇಜ್ ನಲ್ಲಿ ಕಾಣಿಸುವ Amazon Prime Lite ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಆಫರ್ ಆಕ್ಟಿವೇಟ್ (Activate) ಮಾಡಿಕೊಳ್ಳಿ.
ಇದನ್ನೂ ಓದಿ : ರಶ್ಮಿಕಾ ‘ಮೈಸಾ’ ಕಿಲ್ಲಿಂಗ್ ದರ್ಶನ..!



















