ಚಿತ್ರದುರ್ಗ : ನಾವೆಲ್ಲ ಇಲ್ಲಿ ನಮ್ಮ ಸಚಿವ, ಸದಾ ಹಸನ್ಮುಖಿ ಸುಧಾಕರ್‌ರವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದೇವೆ. ಸುಧಾಕರ್ ಕೇವಲ ಕಾಂಗ್ರೆಸ್ ಅಥವಾ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಆಸ್ತಿ ಆಗಿರಲಿಲ್ಲ ಇಡೀ ರಾಜ್ಯಕ್ಕೆ ಆಸ್ತಿ ಆಗಿದ್ರು ಎಂದು ರಣದೀಪ್‌ಸಿಂಗ್ ಸುರ್ಜೇವಾಲಾ ಬಾವುಕರಾಗಿದ್ದಾರೆ.
ಡಿ.ಸುಧಾಕರ ಅಂತಿಮ ದರ್ಶನ ಪಡೆದ ಮಾತನಾಡಿದ ಅವರು, ಜಾತಿ ಮತ ಮುಖ್ಯವಲ್ಲ, ಜನಸೇವೆ ಮುಖ್ಯ ಅಂತಾ ತೋರಿಸಿದವರು. ಸುಧಾಕರವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ. ನಮ್ಮ ಹೃದಯದಲ್ಲಿ ನಮ್ಮ ನೆನಪಿನಲ್ಲಿ ಸುಧಾಕರ್ ಸದಾ ಇರ್ತಾರೆ ಎಂಧು ಸಂತಾಪ ಸೂಚಿಸಿದ್ದಾರೆ.



















