ಬೆಂಗಳೂರು:SIR ಕರ್ತವ್ಯ ನಿರತ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.
44 ವರ್ಷದ ಶಮಂತ ಕುಮಾರಿ ಮೃತ ಶಿಕ್ಷಕಿ. ಇತ್ತೀಚೆಗಷ್ಟೇ ಅವರಿಗೆ ಎಸ್‌ಐಆರ್ ಜವಾಬ್ದಾರಿ ವಹಿಸಲಾಗಿತ್ತು. ಶಮಂತ ಕುಮಾರಿ ಅವರಿಗೆ ಮಧುಮೇಹ ಹಾಗೂ ಬಿಪಿ ಸಮಸ್ಯೆ ಇತ್ತು ಎನ್ನಲಾಗಿದೆ. ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ವೈದ್ಯರ ಮಾಹಿತಿ ಪ್ರಕಾರ, ಹೃದಯಾಘಾತದಿಂದ ಶಮಂತ ಕುಮಾರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಶಿಕ್ಷಕಿಯ ಅಕಾಲಿಕ ನಿಧನಕ್ಕೆ ಶಿಕ್ಷಣ ಇಲಾಖೆ ಹಾಗೂ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.



















