ಬೆಂಗಳೂರು : ರಾಜ್ಯದ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕೆ.ಇ.ಅರ್.ಸಿ (KERC) ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಇಂದಿನಿಂದಲೇ ಗೃಹಬಳಕೆ ವಿದ್ಯುತ್ ದರದಲ್ಲಿ ಏರಿಕೆ ಜಾರಿಯಾಗಿದ್ದು, ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದೆ. ಮೇ ತಿಂಗಳ ಬಿಲ್‌ನಿಂದ ಈ ಹೊಸ ದರ ಅನ್ವಯವಾಗಲಿದೆ.
ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಿದ KERC, ಈ ದರ ಏರಿಕೆಗೆ ಮಂಜೂರು ನೀಡಿದೆ. 2024-25ನೇ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ 34,084 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಕೇವಲ 32,019 ಕೋಟಿ ರೂಪಾಯಿ ಆದಾಯ ಮಾತ್ರ ಬಂದಿದ್ದು, ಸುಮಾರು 2,068 ಕೋಟಿ ರೂಪಾಯಿ ಕೊರತೆ ಉಂಟಾಗಿದೆ.
ಈ ಕೊರತೆಯನ್ನು ಪೂರೈಸಲು ಗ್ರಾಹಕರಿಂದಲೇ ಸಂಗ್ರಹಿಸುವಂತೆ KERC ಆದೇಶಿಸಿದೆ. ಅದರ ಭಾಗವಾಗಿ ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಇದು ಮತ್ತಷ್ಟು ಭಾರವಾಗಲಿದೆ.
ಇದನ್ನೂ ಓದಿ : ಆಟೋ ಚಾಲಕರಿಗೆ ಮತ್ತೆ ಶಾಕ್ – LPG ಗ್ಯಾಸ್ ದರ ಹೆಚ್ಚಳ!



















