ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸಾಕು ನಾಯಿಗಳ ದಾಳಿಯ ಘಟನೆಗಳು ಮರುಕಳಿಸುತ್ತಿದ್ದು, ಇದೀಗ ಮಹದೇವಪುರದಲ್ಲಿ 12 ವರ್ಷದ ಬಾಲಕನ ಮೇಲೆ ರಾಟ್‌ವೈಲರ್ ನಾಯಿ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜೂನ್ 13ರಂದು ಮಧ್ಯಾಹ್ನ ಸುಮಾರು 2.30ಕ್ಕೆ, 12 ವರ್ಷದ ಬಾಲಕ ಸೈಕಲ್‌ನಲ್ಲಿ ತೆರಳುತ್ತಿದ್ದ ವೇಳೆ ಶ್ಯಾಮ್ ಎಂಬುವರಿಗೆ ಸೇರಿದ ರಾಟ್‌ವೈಲರ್ ನಾಯಿ ಏಕಾಏಕಿ ಬಾಲಕನ ಮೇಲೆರಗಿ ಸೊಂಟದ ಭಾಗಕ್ಕೆ ಕಚ್ಚಿದೆ.
ಬಾಲಕ ಕಿರುಚಾಡುತ್ತಿದ್ದಂತೆ ಸ್ಥಳೀಯರು ಧಾವಿಸಿ ನಾಯಿಯನ್ನು ದೂರ ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಾಯಿ ಮಾಲೀಕ ಶ್ಯಾಮ್ ವಿರುದ್ಧ ದೂರು ದಾಖಲಿಸಲಾಗಿದೆ. ಬಾಲಕನ ತಂದೆ ವಿಪಿನ್ ಅವರು ನಾಯಿ ಕಚ್ಚಿದ ಬಗ್ಗೆ ಪ್ರಶ್ನಿಸಿದಾಗ, “ನಿಮ್ಮ ಮಗನೇ ನಾಯಿಯನ್ನು ಕೆಣಕಿದ್ದಾನೆ” ಎಂದು ಶ್ಯಾಮ್ ಅವರ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಕುಡಿದ ಅಮಲಿನ ಬೈಕ್ ರೈಡ್ – ಕಾಲುವೆಗೆ ಬಿದ್ದು ಸವಾರ ಸಾವು!



















