ಬೆಂಗಳೂರು : ಬೆಂಗಳೂರುದಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿಯನ್ನು ಬೇಟಿ ನೆಪದಲ್ಲಿ ಕಿಡ್ನಾಪ್ ಮಾಡಿ ದರೋಡೆ ಮಾಡಿದ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಸೈಯದ್ ಎಂಬಾತನಿಗೆ ಡೇಟಿಂಗ್ ಆ್ಯಪ್ ಮೂಲಕ ವಾಸೀಂ ಎಂಬಾತನನ್ನು ಪರಿಚಯಿಸಿಕೊಂಡಿದ್ದಾನೆ. ಇಬ್ಬರೂ ಕೆಲ ದಿನಗಳ ಕಾಲ ಆ್ಯಪ್ ಮೂಲಕ ಚಾಟಿಂಗ್ ನಡೆಸಿದ್ದು, ನಂತರ ಭೇಟಿಯಾಗುವಂತೆ ವಾಸೀಂ ಸೈಯದ್‌ಗೆ ಕರೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಬೇಟಿ ಸಂದರ್ಭದಲ್ಲಿ ಸೈಯದ್‌ನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿದೆ. ನಂತರ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ವಾಸೀಂ ಮತ್ತು ಅವನ ಗ್ಯಾಂಗ್ ಮೇಲೆ ಕೇಳಿಬಂದಿದೆ. ಕಿಡ್ನಾಪ್ ವೇಳೆ ಚಾಕುವಿನಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಈ ನಡುವೆ ಘಟನೆ ಬಗ್ಗೆ ತಿಳಿದ ಸಾರ್ವಜನಿಕರಿಂದ ಆರೋಪಿಗಳ ಮೇಲೆ ಹಲ್ಲೆ ನಡೆದಿದ್ದು, ಈ ವೇಳೆ ವಾಸೀಂ ಕಾಲಿಗೆ ಗಾಯವಾಗಿದೆ. ಗಾಯಗೊಂಡ ವಾಸೀಂ ನಂತರ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಸೈಯದ್ ನೀಡಿದ ದೂರು ಆಧರಿಸಿ ಪೊಲೀಸರು ವಾಸೀಂ ಮತ್ತು ಇತರ ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಅಶ್ಲೀಲ ವಿಡಿಯೋ ನೋಡಿ 9 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ 12 ವರ್ಷದ ಬಾಲಕ!


















