ಬೆಂಗಳೂರು : ದೇಶದಲ್ಲಿ ದಿನೇದಿನೆ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ಮೂಲಕ ಹಣ ಪಾವತಿಸುವುದು ಜಾಸ್ತಿಯಾಗುತ್ತಿದೆ. ಸಣ್ಣ ಗೂಡಂಗಡಿಯಿಂದ ಹಿಡಿದು ಮಾಲ್ ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಇದೆ. ಕಳೆದ ಜುಲೈನಲ್ಲಿಯೇ ದೇಶಾದ್ಯಂತ ಯುಪಿಐ ಮೂಲಕ 29 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರ ಬೆನ್ನಲ್ಲೇ, ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಹಾಗಾಗಿ, ಸಾರ್ವಜನಿಕರಿಗೂ ಇದು ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಕಾಡುವಂತಾಗಿದೆ.
ಕೇಂದ್ರ ಸರ್ಕಾರವು ಪೇಮೆಂಟ್ ಆ್ಯಂಡ್ ಮತ್ತು ಸೆಟಲ್ ಮೆಂಟ್ ಸಿಸ್ಟಮ್ಸ್ ಕಾಯ್ದೆಗೆ ತಿದ್ದುಪಡಿ ತಿದ್ದುಪಡಿ ತರಲು ಮಸೂದೆ ಮಂಡಿಸಿದೆ. ಭವಿಷ್ಯದಲ್ಲಿ ಕೆಲವು ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಶುಲ್ಕ ಅಂದರೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ವಿಧಿಸಲು ಕಾನೂನು ಅವಕಾಶ ಕಲ್ಪಿಸುವ ಪ್ರಸ್ತಾಪ ಮಾಡಲಾಗಿದೆ.
ಜನ ಶುಲ್ಕ ಪಾವತಿಸಬೇಕಾ?
ಸದ್ಯಕ್ಕೆ ಯಾವುದೇ ಹೊಸ ಶುಲ್ಕವನ್ನು ಅಧಿಕೃತವಾಗಿ ಜಾರಿಗೆ ತಂದಿಲ್ಲ. ಆದರೆ, ದೊಡ್ಡ ಪ್ರಮಾಣದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳ ಮೇಲೆ ಶೇ. 0.3 ರಿಂದ ಶೇ. 0.5 ರಷ್ಟು ಎಂಡಿಆರ್ (MDR) ಶುಲ್ಕ ವಿಧಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ವಾರ್ಷಿಕ ರೂ. 1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ಬೃಹತ್ ವ್ಯಾಪಾರಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುವ ನಿರೀಕ್ಷೆಯಿದೆ.
ಇದರಿಂದ ಸಾಮಾನ್ಯ ಗ್ರಾಹಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಹೇಳಲಾಗುತ್ತಿದೆ. ಯುಪಿಐ ಸೇವೆಗಳನ್ನು ಉಚಿತವಾಗಿ ನೀಡುವುದರಿಂದ ಡಿಜಿಟಲ್ ಪಾವತಿ ಸಂಸ್ಥೆಗಳಿಗೆ ಮತ್ತು ಬ್ಯಾಂಕ್ ಗಳಿಗೆ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ ಎಂಬ ಉದ್ಯಮ ಕ್ಷೇತ್ರದ ಬೇಡಿಕೆಯ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಪ್ರಸ್ತುತ ಈ ಬದಲಾವಣೆಯು ಕೇವಲ ಕಾನೂನು ರೂಪದಲ್ಲಷ್ಟೇ ಇದ್ದು, ಅಂತಿಮ ನಿರ್ಧಾರ ಕೈಗೊಂಡ ಬಳಿಕವೇ ಇದರ ಸ್ಪಷ್ಟತೆ ಸಿಗಲಿದೆ. ಅಲ್ಲಿಯವರೆಗೆ ಎಂದಿನಂತೆ ಎಲ್ಲ ಯುಪಿಐ ಪಾವತಿಗಳು ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ.
ಇದನ್ನೂ ಓದಿ : ಹೆಬ್ಬಾಳ–ಮೇಖ್ರಿ ಸರ್ಕಲ್ ನಡುವೆ ಮಿನಿ ಟನಲ್ ಕಾಮಗಾರಿ ಆರಂಭ!



















“ನನ್ನ ಹಾಗೂ ಬ್ಯಾಟ್‌ಮ್ಯಾನ್ ಅನ್ನು ಯಾರೂ ಒಂದೇ ರೂಮ್‌ನಲ್ಲಿ ನೋಡಿಲ್ಲ” : ರಾಹುಲ್ ಗಾಂಧಿ!