ಬೆಂಗಳೂರು: ಬೆಂಗಳೂರು ಯಶವಂತಪುರದಲ್ಲಿ ನಿನ್ನೆ ತಡರಾತ್ರಿ ಯಾವುದೇ ಗಾಳಿಯೂ ಇಲ್ಲದೇ, ಮಳೆಯೂ ಇಲ್ಲದೇ ಏಕಾಏಕಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ ಘಟನೆ ನಡೆದಿದೆ.
ಯಶವಂತಪುರದ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಮರ ಬಿದ್ದ ರಭಸಕ್ಕೆ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ಬೈಕ್‌ಗಳಿಗೆ ಹಾನಿ ಸಂಭವಿಸಿದೆ. ಮರದ ಕೆಳಭಾಗದಲ್ಲಿ ನಿಲ್ಲಿಸಿದ್ದ ಹಲವು ಬೈಕ್‌ಗಳು ನಜ್ಜುಗುಜ್ಜಾಗಿದ್ದು, ಕೆಲವು ವಾಹನಗಳಿಗೆ ಭಾಗಶಃ ಡ್ಯಾಮೇಜ್ ಆಗಿದೆ ಎಂದು ತಿಳಿದುಬಂದಿದೆ.
ಘಟನೆ ರಾತ್ರಿ ವೇಳೆಯಲ್ಲಿ ನಡೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಬೆಳಗ್ಗೆ ಘಟನೆ ಕಂಡು ಆಶ್ಚರ್ಯಗೊಂಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ : ಮೈಸೂರು ಪೊಲೀಸರ ಭರ್ಜರಿ ಕಾರ್ಯಚರಣೆ – ಅಂತರರಾಜ್ಯ ಮಹಿಳಾ ಆರೋಪಿಗಳು ಸೇರಿ ಮೂವರು ಅರೆಸ್ಟ್!


















