ಹಾಸನ : ಡಾ. ಬಿ.ಆರ್ .ಅಂಬೇಡ್ಕರ್ ಜಯಂತಿ ಹಿನ್ನೆಲೆ ದಲಿತರ ಮನೆಯಲ್ಲಿ ಶಾಸಕ ಎ.ಮಂಜು ವಾಸ್ತವ್ಯ ಹೂಡಿದ್ದು, ಅಬ್ಬೂರು ಮಾಚಗೋಡನಹಳ್ಳಿಯಲ್ಲಿನ ಲಕ್ಷ್ಮಮ್ಮ ಎಂಬವರ ನಿವಾಸದಲ್ಲಿ ತಂಗಿದ್ದಾರೆ.
ಲಕ್ಷ್ಮಮ್ಮ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಶಾಸಕರಿಗೆ ಮನೆಯಲ್ಲೇ ತಯಾರಿಸಿದ ಸರಳ ಊಟವನ್ನು ಬಡಿಸಲಾಯಿತು. ಮುದ್ದೆ ಹಾಗೂ ಸೊಪ್ಪು ಸಾರು ಸೇರಿದಂತೆ ಸ್ಥಳೀಯ ಆಹಾರವನ್ನು ಶಾಸಕರು ಸವಿದಿದ್ದಾರೆ.
ಈ ಸಂದರ್ಭದಲ್ಲಿ ಅರಕಲಗೂಡು ತಹಸೀಲ್ದಾರ್ ಸೌಮ್ಯ ಕೂಡ ಶಾಸಕರೊಂದಿಗೆ ಕೂತು ಊಟದಲ್ಲಿ ಪಾಲ್ಗೊಂಡರು. ಗ್ರಾಮೀಣ ಜೀವನ ಶೈಲಿಯನ್ನು ಅನುಭವಿಸಿದ ಶಾಸಕ ಎ. ಮಂಜು ಅವರು, ಲಕ್ಷ್ಮಮ್ಮ ಅವರ ಮನೆಯಲ್ಲಿ ತಂಗಿದ್ದಾರೆ. ಅಂಬೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗಾಳಿ ಇಲ್ಲ.. ಮಳೆ ಇಲ್ಲ.. ಯಶವಂತಪುರದಲ್ಲಿ ಧರೆಗುರುಳಿದ ಬೃಹತ್ ಮರ



















