ಉಡುಪಿ : ಭಾರತೀಯ ರತ್ನಗಳ ಮತ್ತು ಆಭರಣ ಸಂಸ್ಥೆಯ (ಐಐಜಿಜೆ) ನೂತನ ಕಚೇರಿ ಉದ್ಘಾಟನೆಯನ್ನು ಇಂದು (ಏ.28) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೆರವೇರಿಸಿದ್ದಾರೆ.
ಉಡುಪಿಯ ಬನ್ನಂಜೆಯ ಜಿಲ್ಲಾ ಪಂಚಾಯತಿ ಕಟ್ಟಡದ ಮೊದಲ ಮಹಡಿಯಲ್ಲಿ ಐಐಜಿಜೆ ನವೀನ ಕಚೇರಿ ಉದ್ಘಾಟನೆ ನಡೆಯಿತು. ಕೇಂದ್ರ ಸರ್ಕಾರ ಪ್ರಾಯೋಜಕತ್ವದ ದಕ್ಷಿಣ ಭಾರತದ ಏಕೈಕ ಸಂಸ್ಥೆ ಇದಾಗಿದ್ದು, ಇಲ್ಲಿ ಆಭರಣ ಹಾಗೂ ನವರತ್ನ ವಿನ್ಯಾಸ ಇತ್ಯಾದಿಗಳ ಆಧುನಿಕ ತಂತ್ರಜ್ಞಾನ ಆಧಾರಿತ ತರಬೇತಿ ನೀಡಲಾಗುತ್ತದೆ.

ಇನ್ನು ಕಚೇರಿ ಉದ್ಘಾಟನೆಯ ಮುನ್ನ ನಿರ್ಮಲಾ ಸೀತಾರಾಮನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ವಿತ್ತ ಸಚಿವೆಯನ್ನು ಗೌರವಿಸಲಾಗಿದೆ.

ಇನ್ನು ಇದೇ ವೇಳೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಅನೇಕ ಗಣ್ಯರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಾಥ್ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಮಧ್ಯಾಹ್ನ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದು, ನಿಟ್ಟೆಯಲ್ಲಿ ನೆಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಅಚ್ಚರಿ ಮೂಡಿಸಿದ ಅವಳಿಗಳ ಅಂಕ.. ಓದುವುದರಲ್ಲೂ ನಾವು ಸೇಮ್ ಎಂದ ವಿದ್ಯಾರ್ಥಿನಿಯರು!



















