ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುವಾಗಲೇ ಬಿಯರ್ ಬಾಟಲ್ ಹಿಡಿದು ಪಬ್ಲಿಕ್‌ನಲ್ಲೇ ಕುಡಿಯುತ್ತಾ ಪುಂಡರು ಪುಂಡಾಟ ಮೆರೆದಿದ್ದಾರೆ.
ಸ್ಕೂಟರ್ ಏರಿದ್ದ ಮೂವರು ಹೆಲ್ಮೆಟ್ ಹಾಕದೆ ಜಾಮ್ ಜೂಮ್ ಅಂತಾ ತ್ರಿಬ್ಬಲ್ ರೈಡಿಂಗ್ ಬೇರೆ ಮಾಡಿದ್ದು, ಹಿಂದೆ ಕುಳಿತಿದ್ದ ಪುಂಡ ಬಿಯರ್ ಹೀರುತ್ತಾ.. ಸ್ನ್ಯಾಕ್ಸ್ ಚಪ್ಪರಿಸುತ್ತಾ ʻಯಾರ ಹಂಗು ನಮಗೇನುʼ ಅನ್ನೋ ಥರ ರೈಡಿಂಗ್‌ನ್ನೇ ಬಾರ್ ಥರ ಬದಲಾಯಿಸ್ಕೊಂಡಿರುವ ವಿಡಿಯೋ ವೈರಲ್ ಆಗಿದೆ.
ನಾಗರಭಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಹೋಗುವಾಗ ಪುಂಡರು ಎಣ್ಣೆ ಹೊಡೆದಿದ್ದು, ಹಿಂಬದಿ ಕಾರಲ್ಲಿದ್ದವರು ಪುಂಡರ ಹುಚ್ಚಾಟದ ವಿಡಿಯೋ ಮಾಡಿದ್ದಾರೆ. KA 05 LL 0288 ನಂಬರ್‌ನ ಸ್ಕೂಟರ್‌ನ್ನ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯ ನೂತನ ಕಚೇರಿ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್!



















