ಬೆಂಗಳೂರು : ಹಯಗ್ರೀವ ಮೆಡಿಕಲ್ & ವುಮೆನ್ಸ್ ಹೆಲ್ತ್ ಕ್ಲಿನಿಕ್ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಉಚಿತ ಸಮಗ್ರ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕುರುಡುತನವನ್ನು ತಡೆಗಟ್ಟುವ ಉದ್ದೇಶದಿಂದ ಈ ಶಿಬಿರ ನಡೆಯಲಿದ್ದು, ಕುಟುಂಬ ಸಮೇತರಾಗಿ ಈ ಶಿಬಿರದಲ್ಲಿ ಭಾಗವಹಿಸಿ ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಹಯಗ್ರೀವ ಹೆಲ್ತ್ ಕ್ಲಿನಿಕ್ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಮನವಿ ಮಾಡಿದೆ.
ಇದೇ ಬರುವ ಮೇ 31ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಉಚಿತ ಶಿಬಿರ ನಡೆಯಲಿದೆ. ಯಲಹಂಕ ನ್ಯೂಟೌನ್‌ನ ಹಯಗ್ರೀವ ಮೆಡಿಕಲ್ & ವುಮೆನ್ಸ್ ಹೆಲ್ತ್ ಕ್ಲಿನಿಕ್‌ನಲ್ಲಿ ಶಿಬಿರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಸಮಗ್ರ ಕಣ್ಣಿನ ಪರೀಕ್ಷೆ, ಕ್ಯಾಟರಾಕ್ಟ್ ತಪಾಸಣೆ, ದೃಷ್ಟಿ ಪರೀಕ್ಷೆ ಹಾಗೂ ಸಾಮಾನ್ಯ ಕಣ್ಣಿನ ರೋಗಗಳ ತಪಾಸಣೆ ನಡೆಯಲಿದೆ.

ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಕೂಡ ಮಾಡಲಾಗುತ್ತದೆ. ಹಿರಿಯ ನಾಗರಿಕರು, ದೃಷ್ಟಿ ಮಂಕಾಗಿರುವವರು, ತಲೆನೋವು ಸಮಸ್ಯೆಯಿಂದ ಬಳಲುತ್ತಿರುವವರು, ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಹಾಗೂ ಕಣ್ಣಿನ ಸಮಸ್ಯೆ ಅನುಭವಿಸುತ್ತಿರುವ ಎಲ್ಲರೂ ಈ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 8884333697 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. “ಉತ್ತಮ ದೃಷ್ಟಿ – ಉತ್ತಮ ಜೀವನ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಹಯಗ್ರೀವ ಹೆಲ್ತ್ ಕ್ಲಿನಿಕ್ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಮನವಿ ಮಾಡಿದೆ.
ಇದನ್ನೂ ಓದಿ : 3-ಸಿಲಿಂಡರ್ ಎಸ್‌ಯುವಿಗಳಿಗಿಂತ 4-ಸಿಲಿಂಡರ್ ‘ಸಿಟಿ’ ಏಕೆ ಬೆಸ್ಟ್? ಇಲ್ಲಿದೆ ಡೀಟೇಲ್ಸ್



















