ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಎರಡನೇ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ ತಲಾ 2,500 ರೂ. ವಿತರಿಸಿದ್ದ ಸರ್ಕಾರ, ಇದೀಗ ಬಾಕಿ ಇರುವ 2,500 ರೂ.ಗಳನ್ನು ಅರ್ಹ ರೈತರ ಖಾತೆಗೆ ಜಮೆ ಮಾಡಲು ಆದೇಶಿಸಿದೆ.
ಒಟ್ಟು 17 ಮಾರ್ಗಸೂಚಿಗಳ ಪ್ರಕಾರ ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ಗರಿಷ್ಠ 2 ಹೆಕ್ಟೇರ್ ಜಮೀನಿಗೆ ಮಾತ್ರ ಪರಿಹಾರ ಸಿಗಲಿದ್ದು, ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್ಗೆ 11,000 ರೂ., ನೀರಾವರಿ ಬೆಳೆಗೆ 22,000 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಗರಿಷ್ಠ 30,000 ರೂ. ನಿಗದಿಪಡಿಸಲಾಗಿದೆ.
ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಂದ ವಿತರಣೆ ಆರಂಭವಾಗಲಿದ್ದು, ಮೊದಲಿಗೆ ಮಳೆಯಾಶ್ರಿತ, ನಂತರ ನೀರಾವರಿ ಹಾಗೂ ಕೊನೆಯಲ್ಲಿ ಬಹುವಾರ್ಷಿಕ ಬೆಳೆಗಾರರಿಗೆ ಹಣ ಬಿಡುಗಡೆಯಾಗಲಿದೆ.
















