ಬೆಳಗಾವಿ : ಜಿಲ್ಲೆಯ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಡೀ ನಗರದಲ್ಲಿ ಆತಂಕ ಮನೆ ಮಾಡಿದೆ.
ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಪರೀಕ್ಷೆಗೆಂದು ಓದುತ್ತಿದ್ದರು. ಗುಂಡು ಕಿಟಕಿಯ ಗ್ಲಾಸ್‌ಗೆ ಬಡಿದಿದ್ದು, ಅದೃಷ್ಟವಶಾತ್ ಸಂಸ್ಕೃತಿ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮನೆಯ ಗ್ಲಾಸ್ ಮೇಲೆ ಫೈರಿಂಗ್ ಮಾರ್ಕ್ ಬಿದ್ದಿದ್ದು, ಘಟನಾ ಸ್ಥಳಕ್ಕೆ ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೂಜಾ ಅವರು ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು, ಸದ್ಯ ಹೈ ಪ್ರೊಫೈಲ್ ಕೇಸ್ ಒಂದರ ಪರ ವಾದ ಮಾಡುತ್ತಿದ್ದಾರೆ.
ಗುಂಡು ತಗುಲಿರೋ ಕಿಟಕಿ ಗಾಜನ್ನು ಪರಿಶೀಲನೆಗಾಗಿ ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಡಿನ ದಾಳಿ ಬಳಿಕ ಅವರ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ವಕೀಲೆ ಪೂಜಾ ಕಾಕತಕರ್ ಅವರು ಹೈ ಪ್ರೊಫೈಲ್ ಪ್ರಕರಣವೊಂದರಲ್ಲಿ ವಾದ ಮಾಡುತ್ತಿರುವ ಹಿನ್ನೆಲೆ ಈ ಗುಂಡಿನ ದಾಳಿ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಶಿಕ್ಷಕಿ ಆತ್ಮಹತ್ಯೆ!



















