ಬೆಂಗಳೂರು:ಸ್ಟಿಂಗ್ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಪರಸ್ಪರ ಕಿತ್ತಾಟ ಮುಂದುವರಿದಿದೆ. ಸ್ಟಿಂಗ್ ಆರೋಪಿಯನ್ನು ಇನ್ನೂ ಯಾಕೆ ಬಂಧಿಸಿಲ್ಲ? ಆತನ ಬಳಿ ಇನ್ನೂ 12 ವಿಡಿಯೋಗಳಿವೆ. ಸರ್ಕಾರ ಆತನನ್ನು ರಕ್ಷಿಸುತ್ತಿದೆ. ಕಿಂಗ್ ಪಿನ್ಗೆ ತೋರಿಕೆಗಷ್ಟೇ ಸಮನ್ಸ್ ನೀಡಲಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ತನಿಖೆಯನ್ನ ಬಿಗ್ ಬಾಸ್ ರೀತಿಯಲ್ಲಿ ಲೈವ್ ಮಾಡಲಾಗಲ್ಲ. ನೀವೇನು ನಮ್ಮ ಹೈಕಮಾಂಡಾ ಎಂದು ಪ್ರಿಯಾಂಕ್ ಖರ್ಗೆ ಮರುಪ್ರಶ್ನೆ ಹಾಕಿದ್ದಾರೆ.

















