ದಾವಣಗೆರೆ:ಕಾಂಗ್ರೆಸ್ ಅಂದ್ರೆ ಸಿಡಿ ಫ್ಯಾಕ್ಟರಿ. ಮ್ಯಾನುಫ್ಯಾಕ್ಚರ್ಸೂ ಅವರೇ, ಫಲಾನುಭವಿಗಳೂ ಅವರೇ, ಸಂತ್ರಸ್ತರೂ ಅವರೇ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಈ ಮಾತು ಆಡಿದ್ದಾರೆ.
ರಾಜಕಾರಣದಲ್ಲಿ ನಮ್ಮ ಸಿದ್ಧಾಂತ ಬೇರೆ. ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ಯಡಿಯೂರಪ್ಪ ನಮಗೆ ಆದರ್ಶ. ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯ ಮಾಸ್ ಲೀಡರ್. ಸಿದ್ದರಾಮಯ್ಯರನ್ನೇ ಸಿಲುಕಿಸೋಕೆ ಹೊರಟಿದ್ದಾರೆ. ಸ್ಟಿಂಗ್ ಆಪರೇಷನ್ ರಾಜ್ಯಕ್ಕೆ ಕಳಂಕ, ಇದು ಒಳ್ಳೆಯದಲ್ಲ ಎಂದಿದ್ದಾರೆ.


















