ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಅದ್ಧೂರಿಯಾಗಿ ನೆರವೇರಿದೆ. ಮಳೆಯ ನಡುವೆಯೂ ಸಾಂಪ್ರದಾಯಿಕ ವಾದ್ಯ ಡೋಲುಗಳ ಮುಖೇನ ಅಮ್ಮನವರ ರಥೋತ್ಸವ ವೈಭವದಿಂದ ಸಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಈ ವೈಭವದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಮನೆತನದ ರಾಜಮಾತ ಪ್ರಮೋದಾ ದೇವಿ ಒಡೆಯರ್, ಯದುವೀರ್ ಒಡೆಯರ್, ಯುವರಾಣಿ ತ್ರಿಷಿಕಾ ಕುಮಾರಿ ಹಾಗೂ ಅದ್ಯಾವೀರ್ ಒಡೆಯರ್ ಪಾಲ್ಗೊಂಡು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
















