ಬನ್ನೇರುಘಟ್ಟದ ಜೈವಿಕ ಉದ್ಯಾನ ವನದಿಂದ ಜಪಾನ್ ಗೆ ನಾಲ್ಕು ಆನೆಗಳನ್ನು ವಿನಿಮಯ ಮಾಡಲಾಗಿದೆ. ಜಪಾನ್ ನ ಹಿಮೇಶಿ ಸೆಂಟ್ರಲ್ ಪಾರ್ಕ್ ಗೆ ಪ್ರಾಣಿ ವಿನಿಮಯ ಯೋಜನೆಯ ಅಡಿ 4 ಆನೆಗಳನ್ನು ರವಾನೆ ಮಾಡಲಾಗಿದೆ.

ಗುರುವಾರ ರಾತ್ರಿ ಕತಾರ್ ಏರ್ ವೇಸ್ ನಲ್ಲಿ ಸುರೇಶ್, ಗೌರಿ, ಶೃತಿ ಮತ್ತು ತುಳಸಿ ಆನೆಗಳು ರವಾನೆಯಾಗಿವೆ.
ಬನ್ನೇರುಘಟ್ಟ ಬಳಿಯ ಕಾವಲುಕಟ್ಟೆ ಬಳಿಯಲ್ಲಿ ಕ್ರೇನ್ ಮೂಲಕ ಆನೆಗಳನ್ನು ಸಿಬ್ಬಂದಿ ಸಾಗಿಸಿದ್ದಾರೆ. ಬನ್ನೇರುಘಟ್ಟದಿಂದ ಇದೇ ಮೊದಲ ಬಾರಿಗೆ ವಿದೇಶಕ್ಕೆ ಪ್ರಾಣಿಗಳ ವಿನಿಮಯ ಮಾಡಲಾಗಿದೆ. ಈ ನಿಯಮದಡಿ ಬನ್ನೇರುಘಟ್ಟಕ್ಕೆ ಜಪಾನ್ ಪ್ರಾಣಿಗಳು ಬಂದಿವೆ. ಚಿಂಪಾಂಜಿ, ಜಾಗ್ವಾರ್, ಪೂಮಾ, ಚೀತಾ ಮರಿಗಳು ಆಗಮಿಸಲಿವೆ.



















