ಬೆಂಗಳೂರು:ಯಶವಂತಪುರ ಬಳಿಯ ನೈಂಟಿ ರೂಟ್ನಲ್ಲಿ ಏಕಾಏಕಿ ರಸ್ತೆ ಮಧ್ಯಕ್ಕೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಕಳೆದ ಒಂದು ಗಂಟೆಯ ಹಿಂದೆಯಷ್ಟೇ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಭಾರಿ ಟ್ರಾಫಿಕ್ ಉಂಟಾಗಿತ್ತು. ಆದರೆ ಇಂದು ವಾಹನಗಳ ಓಡಾಟ ವಿರಳವಾಗಿದ್ದ ಕಾರಣ ಸವಾರರಿಗೆ ಆಗಬಹುದಾಗಿದ್ದ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.
ಸದ್ಯ ಮರ ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ, ಒನ್ ವೇ ಮೂಲಕ ಯಶವಂತಪುರ ಸರ್ಕಲ್ ಕಡೆಗೆ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿರುವ ಜಿಬಿಎ ಸಿಬ್ಬಂದಿ ಸದ್ಯ ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.



















