ಉಡುಪಿ : ಮೊದಲಿನಿಂದಲೂ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಿದ್ದರು. ಹಿಂದುಗಳು ಕೂಡ ಜನಿವಾರ ಧರಿಸುತ್ತಾರೆ ಮತ್ತು ಕುಂಕುಮ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ನ್ಯಾಯಾಲಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ತಡೆಯಾಜ್ಞೆ ಇಲ್ಲದೆ ಇರುವುದರಿಂದ ನ್ಯಾಯಾಲಯದಲ್ಲಿ ತೀರ್ಪು ಬರಲು 10-20 ವರ್ಷವೂ ಆಗಬಹುದು ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದಾವಣಗೆರೆ ಮುಸ್ಲಿಂ ಮುನಿಸಿಗೂ ಈ ಆದೇಶಕ್ಕೂ ಸಂಬಂಧ ಇಲ್ಲ. ದಾವಣಗೆರೆಯಲ್ಲಿ ಮುಸ್ಲಿಮರು ನಮಗೆ ಮತ ಹಾಕಿದ್ದಾರೆ. ಸ್ವಲ್ಪ ಮತಗಳು ಎಸ್‌ಡಿಪಿಐಗೆ ಹೋಗಿವೆ ಎಂದಿದ್ದಾರೆ.
ಮುಸ್ಲಿಮರು ಈಗಲೂ ನಮಗೆ ಸಾಕಷ್ಟು ಮತ ಹಾಕಿದ್ದಾರೆ. ಯಾವ ಸಮಯಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಅದನ್ನು ಸರ್ಕಾರ ತೆಗೆದುಕೊಂಡಿದೆ. ಸುಳ್ಳು ಹೇಳುವುದು ಜನರನ್ನು ಎತ್ತಿ ಕಟ್ಟುವುದೇ ಬಿಜೆಪಿಯವರ ಕೆಲಸ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ :ಡಿಸಿಎಂ ಬರ್ತ್‌ಡೇಗೆ ಸ್ಪೆಷಲ್ ಗಿಫ್ಟ್ - ರಂಗೋಲಿಯಲ್ಲಿ ಮೂಡಿದ ಡಿಕೆಶಿ ಭಾವಚಿತ್ರ!


















