ಚೆನ್ನೈನಲ್ಲಿ ನಡೆದ ಆಂಧ್ರ ಮಾಜಿ ಸಿಎಂ ಸಂಬಂಧಿಕರ ಮದುವೆ ಸಮಾರಂಭಕ್ಕೆ ನಟ ವಿಜಯ್ ಹಾಗೂ ನಟಿ ತ್ರಿಷಾ ಒಟ್ಟಿಗೆ ಆಗಮಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ವೇದಿಕೆ ಮುಂಭಾಗ ಕೆಲಸಮಯ ಒಟ್ಟಿಗೆ ಕಳೆದಿದ್ದು, ನವಜೋಡಿಗೆ ಹಾರೈಸಿದ ಇವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ ಇವರಿಬ್ಬರೂ ಕ್ಯಾಮೆರಾಗೆ ಒಟ್ಟಿಗೆ ಪೋಸ್ ಕೊಟ್ಟಿದ್ದು, ಇವರ ನಡುವಿನ ಆತ್ಮೀಯತೆ ಈಗ ಗುಟ್ಟಾಗಿ ಉಳಿದಿಲ್ಲ.
ಈ ಹಿಂದೆ ವಿಜಯ್ ಅವರ ಡಿವೋರ್ಸ್ ಚರ್ಚೆಯಲ್ಲೂ ತ್ರಿಷಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಸದ್ಯಕ್ಕೆ ಅವರ ಪತ್ನಿ ಸಂಗೀತಾರಿಂದ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆಯಲಾಗಿದೆ. ಪ್ರಸ್ತುತ ಸಿಎಂ ಆಗಿರುವ ವಿಜಯ್ ಅವರ ಈ ನಡೆಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದು, ‘ಒಬ್ಬ ಸಿಎಂ ಹೀಗೆಲ್ಲಾ ಮಾಡೋದು ಸರಿನಾ’ ಎಂಬ ಕಾಮೆಂಟ್ಗಳು ವ್ಯಕ್ತವಾಗುತ್ತಿವೆ.



















